For the best experience, open
https://m.navayuganews.com
on your mobile browser.
Advertisement

ಬೆಂಗಳೂರು, ಡಿ.29 : ವಿ,ಎಸ್,ಎಸ್ ಅಭಿಮಾನ್ ಡಾಕ್ಟರ್ ವಿಷ್ಣುವರ್ಧನ್ ಪುಣ್ಯ ಭೂಮಿ ಟ್ರಸ್ಟ್ ವತಿಯಿಂದ, ಲಯನ್ಸ್ ಕ್ಲಬ್ ಆದರ್ಶ 317ಎ ಮತ್ತು ಬಿ.ಎಸ್.ಕೆ ಜೀವಾಶ್ರಯ ರಕ್ತ ಕೇಂದ್ರದ ಸಹಯೋಗದಲ್ಲಿ ಡಾ.ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಉತ್ತರಹಳ್ಳಿ ಮುಖ್ಯರಸ್ತೆಯ ಅಭಿಮಾನ್ ಸ್ಟುಡಿಯೋದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ ಎಂದು ಟ್ರಸ್ಟ್'ನ ಸಂಸ್ಥಾಪಕ ಅಧ್ಯಕ್ಷರಾದ ಟಿ.ರಾಜುಗೌಡ ಅವರು ತಿಳಿಸಿದರು.

ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಯ 10 ಗುಂಟೆ ಪವಿತ್ರ ಸ್ಥಳದಲ್ಲಿ ಪೂಜಾ ಕಾರ್ಯಕ್ರಮ ಮತ್ತು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಜೊತೆ ಜೀವ ಉಳಿಸುವ ಮಹಾನ್ ಪುಣ್ಯದ ಕೆಲಸವಾದ ರಕ್ತದಾನ ಶಿಬಿರ ಸಹ ಹಮ್ಮಿಕೊಳ್ಳಲಾಗಿದ್ದು, ವಿಷ್ಣು ಅಪ್ಪಾಜಿ ಅಭಿಮಾನಿಗಳು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಲಿದ್ದಾರೆ ಎಂದರು.

Advertisement

ಇದೇ ವೇಳೆ ನಟ ರಮೇಶ್ ಭಟ್, ಸಂಘದ ಗೌರವ ಅಧ್ಯಕ್ಷ ಬಿ.ವೈ ರಮೇಶ್, ಅಧ್ಯಕ್ಷರಾದ ಶ್ರೀಧರ ಮೂರ್ತಿ, ಕಾರ್ಯದರ್ಶಿ ನಾರಾಯಣ ಕೆ, ಉಪಾಧ್ಯಕ್ಷರಾದ ಹರೀಶ್ ಗೌಡ, ಪದಾಧಿಕಾರಿಗಳಾದ ಸ್ನೇಹಾ ರಶ್ಮಿ ಸಾರಂಗ್, ಚಂದಹಾಸ್ ಸೇರಿದಂತೆ ಹಲವರು ಇದ್ದರು.

Advertisement
Tags :
Advertisement