ದಿ ಲಿಪಿ ಮಿಸ್ಟ್ ಪ್ರೀಸ್ಕೂಲ್'ನಲ್ಲಿ "ವೈದ್ಯರ ದಿನ"ದ ಅಂಗವಾಗಿ ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರ
ಬೆಂಗಳೂರು, ಜು - 06 : ಮಾಗಡಿ ರಸ್ತೆಯ ಭರತ್ ನಗರದ ದಿ ಲಿಪಿ ಮಿಸ್ಟ್ ಪ್ರೀಸ್ಕೂಲ್ ಮತ್ತು ಬಿಎಸ್'ಕೆ ಜೀವಾಶ್ರಯ ರಕ್ತ ಕೇಂದ್ರ ಹಾಗೂ ಪುಷ್ಯ ಕಣ್ಣಿನ ಚಿಕಿತ್ಸಾಲಯದ ಸಹಯೋಗದಲ್ಲಿ "ರಾಷ್ಟ್ರೀಯ ವೈದ್ಯರ ದಿನಾಚರಣೆ"ಯ ಅಂಗವಾಗಿ ಶಾಲೆಯ ಮಕ್ಕಳಿಗೆ ಮತ್ತು ಪೋಷಕರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಶಾಲಾ ಶಿಕ್ಷಕರು, ಮಕ್ಕಳ ಪೋಷಕರಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ದಿ ಲಿಪಿ ಮಿಸ್ಟ್ ಪ್ರೀಸ್ಕೂಲ್ ನಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ ಯಶಸ್ಸಿಗೆ ಲಿಪಿ ಮಿಸ್ಟ್ ತಂಡ ಕೈಜೊಡಿಸಿತು ಇದಕ್ಕೆ ನಾವು ಕೃತಜ್ಞತಳಾಗಿದ್ದೇನೆ ಎಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ಹರ್ಷಿಣಿ ಅವರು ತಿಳಿಸಿದರು.
ಎಲ್ಲರ ಸಮರ್ಪಣೆ, ಕಾಳಜಿ ಮತ್ತು ಕಡಿಮೆ ಅವಧಿಯ ನಿರಂತರ ಪ್ರಯತ್ನದಿಂದ ಇಂತಹ ಮರೆಯಲಾಗದಂತ ಸಾಮಾಜಿಕ ಸೇವೆ ನಡೆಯಲು ಸಾಧ್ಯವಾಯಿತು. ಇದರ ಜೊತೆಗೆ ಶಿಬಿರದ ಮುಂಚೂಣಿ ಸೇವಕರಾದ ವೃತ್ತಿಪರ ರಕ್ತ ಕೇಂದ್ರದ ಸಿಬ್ಬಂದಿ ಮತ್ತು ನೇತ್ರ ತಪಾಸಣಾ ಸಿಬ್ಬಂದಿಯ ಸಹಕಾರದಿಂದ ಶಾಲೆಯ ಸಿಬ್ಬಂದಿ, ಮಕ್ಕಳು ಮತ್ತು ಪೋಷಕರಲ್ಲಿ ಸುರಕ್ಷಿತ, ಗೌರವಾನ್ವಿತ ಮತ್ತು ಮೌಲ್ಯಯುತ ಭಾವನೆ ಮೂಡಿಸಿದ್ದೀರಿ ಎಂದು ತಂತ್ರಜ್ಞರ ಸೇವೆಯನ್ನು ಸ್ಮರಿಸಿದರು.
ರಕ್ತದಾನದಿಂದ ಸಮಾಜದಲ್ಲಿ ಸಹಾನೂಭೂತಿ, ಹರಡುವ ನಗು, ಮಾಡಿದ ಸಹಾಯ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ. ವಿದ್ಯಾರ್ಥಿಗಳ ಪೋಷಕರ ಸಹ ಇಂತಹ ಸಮಾಜಮುಖಿ ಕಾರ್ಯ ಮಾಡಿದಕ್ಕೆ ಸಂತಸಗೊಂಡಿದ್ದಾರೆ ಎಂದರು.
ಶಾಲೆಯಲ್ಲಿ ನಡೆದ ರಕ್ತದಾನ ಮತ್ತು ನೇತ್ರ ತಾಪಸಣಾ ಶಿಬಿರ ಯಶಸ್ಸಿಗೆ ಜೊತೆಯಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಂದೆಯು ಇಂತಹ ಸಾಮಾಜಿಕ ಸೇವಾ ಕಾರ್ಯಗಳನ್ನು ಜೊತೆಯಾಗಿ ಮಾಡೋಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಶಿಬಿರದಲ್ಲಿ ಶಾಲೆಯ ಸಿಬ್ಬಂದಿಗಳಾದ ಸುಪ್ರಜಾ, ಶೃತಿ, ಗೀತಾ, ಲಲಿತಾ, ಶಿಲ್ಪಾ, ಸೌಮ್ಯ, ಪದ್ಮಮ್ಮ, ಚೈತ್ರ, ಮಮತಾ, ನಾಗಮಣಿ, ಪವನ್, ರಕ್ತ ಕೇಂದ್ರದ ಹಿರಿಯ ತಂತ್ರಜ್ಞ ಮಂಡ್ಯ ಮಂಜು, ನೇತ್ರ ತಪಾಸಣೆ ತಂಡದ ಸುಜೀತ್ ಇದ್ದರು.