ಸಿದ್ದೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ: ಏಳು ಮಂದಿ ಭಕ್ತರ ದುರ್ಮರಣ
ಬಿಹಾರ ರಾಜ್ಯದ ಜೆಹಾನಾಬಾದ್ ಜಿಲ್ಲೆಯ ಮಗ್ಗುಂಪುರ್‌ನ ಸಿದ್ದೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತದಿಂದ ಏಳು ಮಂದಿ ಭಕ್ತರು ಮೃತಪಟ್ಟಿದ್ದಾರೆ.
08:01 PM Aug 12, 2024 IST
|
ಅಮೃತ ಮೈಸೂರು
Advertisement
ಬಿಹಾರ್,ಆ.12: ಬಿಹಾರ ರಾಜ್ಯದ ಜೆಹಾನಾಬಾದ್ ಜಿಲ್ಲೆಯ ಮಗ್ಗುಂಪುರ್‌ನ ಸಿದ್ದೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತದಿಂದ ಏಳು ಮಂದಿ ಭಕ್ತರು ಮೃತಪಟ್ಟಿದ್ದಾರೆ.
ಮಖ್ಯುಂಪುರ ಬ್ಲಾಕ್‌ನ ವನವರ್ ಬೆಟ್ಟದಲ್ಲಿ ಈ ಘಟನೆ ನಡೆದಿದ್ದು,30ಕ್ಕೂ ಹಚ್ಚುಮಂದಿ ಗಾಯಗೊಂಡಿದ್ದಾರೆ,ಅವರನ್ನೆಲ್ಲಾ ಮಖ್ಯುಂಪುರ್ ಮತ್ತು ಜೆಹಾನಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಶ್ರಾವಣ ಮಾಸದ ಸೋಮವಾದ್ದರಿಂದ ದೇವಾಲಯದ ಒಳಗೆ ಹೆಚ್ಚು ಭಕ್ತರು ಸೇರಿದ್ದರಿಂದ ಏಕಾಏಕಿ ಕಾಲ್ತುಳಿತವಾಗಿದೆ.
ಭಾನುವಾರ ರಾತ್ರಿಯಿಂದಲೇ ಸಿದ್ದೇಶ್ವರನಾಥ ದೇಗುಲದಲ್ಲಿ ಭಕ್ತ ಸಾಗರವೇ ಹರಿದುಬಂದಿತ್ತು.
ಮುಂಜಾನೆ ಕಾಲ್ತುಳಿತ ಸಂಭವಿಸಿದೆ,ಎಲ್ಲರೂ ಪ್ರಾಣ ಉಳಿಸಿಕೊಳ್ಳಲು ಓಡಲಾರಂಭಿಸಿದಾಗ ಈ ಘೋರ ದುರಂತ ಸಂಭವಿಸಿದೆ.
Advertisement
Next Article