For the best experience, open
https://m.navayuganews.com
on your mobile browser.
Advertisement

ವಿಜಯಪುರ, ಅ.29 : ಜಿಲ್ಲೆಯ ರೈತರು ಹತ್ತಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಸಾವಿರಾರು ಎಕರೆ ಆಸ್ತಿ ವಕ್ಫ್ ಬೋರ್ಡ್‌'ಗೆ ಸೇರಿದ್ದು ಎಂದು ಸಾವಿರಾರು ರೈತರಿಗೆ ಸರ್ಕಾರದಿಂದ ನೋಟಿಸ್ ನೀಡುತ್ತಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ಬೆಂಕಿಗೆ ತುಪ್ಪ ಸುರಿಯುವಂತೆ ಮಠ ಒಂದರ ಆಸ್ತಿ ಕೂಡ ವಕ್ಫ್ ಬೋರ್ಡ್‌'ಗೆ ಸೇರಿದ್ದು ಹೇಳುತ್ತಿರುವುದು ಮಠದ ಭಕ್ತರ ಆಕ್ರೋಶಕ್ಕೂ ಕಾರಣವಾಗುತ್ತಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವಿರಕ್ತಮಠದ ಆಸ್ತಿ ಕೂಡ ವಕ್ಫ್ ಬೋರ್ಡ್‌'ನ ಆಸ್ತಿ ಎಂಬ ಹೇಳಿಕೆಗಳು ಬರುತ್ತಿದ್ದಂತೆ ಭಕ್ತರು ಮಠದ ಮುಂದೆ ಜಮಾಹಿಸುತ್ತಿದ್ದು ಸರ್ಕಾರದ ನಡವಳಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

13ನೇ ಶತಮಾನದಲ್ಲಿ ಸ್ಥಾಪನೆಯಾಗಿರುವ ವಿರಕ್ತಮಠದ ಆಸ್ತಿಗ ಸಂಬಂಧಪಟ್ಟ ಪಹಣಿಯ ಕಾಲಂ ನಂ 11 ಕಾಲಿಇತ್ತು. 2018-19 ರಲ್ಲಿ ಖಬರಸ್ಥಾನ ವಕ್ಫ್ ಬೋರ್ಡ್‌ ಎಂದು ಬದಲಾವಣೆ ಮಾಡಲಾಗಿದ್ದು, ಇದನ್ನು ಮಾಡಿದವರು ಯಾರು. ಇದರ ಹಿಂದಿನ ಉದ್ದೇಶ ಏನು ಎಂದು ಮಠದ ಆಡಳಿತ ಸಮಿತಿಯನ್ನ ಪ್ರಶ್ನಿಸುತ್ತಿದ್ದಾರೆ.

ಇಷ್ಟೇ ಅಲ್ಲದೇ ಜಿಲ್ಲೆಯ ಅನೇಕ ಹಿಂದೂ ಮಠಗಳ ಆಸ್ತಿಗಳನ್ನು ವಕ್ಫ್ ಬೋರ್ಡ್‌'ಗೆ ಸೇರಿಸಲಾಗಿದೆ ಎಂಬ ಶಂಕೆಯನ್ನು ಭಕ್ತರು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಸರ್ಕಾರಗಳು ಸ್ಪಷ್ಟನೆ ಕೊಡದಿದ್ದರೆ ಮುಂದಿನ ದಿನಗಳಲ್ಲಿ ರೈತರು ಮತ್ತು ಭಕ್ತರ ಬೀದಿಗಿಳಿದು ತಮ್ಮ ಆಸ್ತಿಗಳನ್ನು ರಕ್ಷಿಸಿಕೊಳ್ಳಬೇಕಾಗಿ ಬರಬಹುದು.

Advertisement
Tags :
Advertisement