HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ವಿಮಾನ ಪತನ: 62 ಮಂದಿ ಸಾವು

ಬ್ರೆಜಿಲ್ ನ ಸಾವೊ ಪೌಲೊ ನಗರ ಪ್ರದೇಶದಲ್ಲಿ ವಿಮಾನ ಪತನಗೊಂಡು 62 ಮಂದಿ ಸಾವನ್ನಪ್ಪಿದ್ದಾರೆ.
03:15 PM Aug 10, 2024 IST | ಅಮೃತ ಮೈಸೂರು
Advertisement

ಬ್ರೆಜಿಲ್,ಆ.10: ಬ್ರಜಿಲ್ ನ ಜನವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡು 62 ಮಂದಿ ಸಾವನ್ನಪ್ಪಿದ್ದಾರೆ.

Advertisement

ಈ ಘಟನೆ ಬ್ರೆಜಿಲ್ ನ ಸಾವೊ ಪಾಲೊ ನಗರದಲ್ಲಿ ನಡೆದಿದೆ.

ಎಟಿಆರ್-72 ಟರ್ಬೊಪ್ರೊಪ್ ವಿಮಾನ ಪರಾನಾ ರಾಜ್ಯದ ಕ್ಯಾಸ್ಕಾವೆಲ್ ನಿಂದ ಸಾವೊ ಪೌಲೊದಲ್ಲಿನ ಗೌರುಲ್ಹೋಸ್ ಗೆ ತೆರಳುತ್ತಿತ್ತು.

ಈ ನತದೃಷ್ಟ ವಿಮಾನ ಗೌರುಲ್ಹೋಸ್ ಗೆ ತೆರಳುವ ಮುನ್ನವೇ ಮಾರ್ಗಮಧ್ಯೆ ಸಾವೊಪೌಲೊ ನಗರದ ಜನವಸತಿ ಪ್ರದೇಶದಲ್ಲೇ ಪತನಗೊಂಡಿದೆ.

ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲ 58 ಪ್ರಯಾಣಿಕರು ಹಾಗೂ ನಾಲ್ಕು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕರಿಗಳು ತಿಳಿಸಿದ್ದಾರೆ.

ವಿಮಾನ ಪತನಕ್ಕೆ ಸಧ್ಯಕ್ಕೆ ಕಾರಣ ಗಿತ್ತಾಗಿಲ್ಲ.ತನಿಖೆ ನಂತರ ನಿಖರ ಕಾರಣ ಗಿತ್ತಾಗಲಿದೆ.

ಅದೃಷ್ಟವಶಾತ್ ಜನವಸತಿ ಪ್ರದೇಶದಲ್ಲಿ ವಿಮಾನ ಪತನವಾದರೂ ಯಾವುದೇ ಮನೆಯ ಮೇಲೆ ಬೀಳದೆ ಬಯಲಿನಲ್ಲಿ ಬಿದ್ದ ಕಾರಣ ಸಾವೊ ಪೌಲೊದಲ್ಲಿನ ಜನರಿಗೆ ಸಾವು,ನೋವು ಆಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement
Tags :
BrezilPlane Crash
Advertisement
Next Article