HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ನೆರೆಯ ದೇಶಗಳು ಸಮೃದ್ಧಿ- ಶಾಂತಿಯ ಹಾದಿಯಲ್ಲಿ ಮುನ್ನಡೆಯಲಿ:ಮೋದಿ

78 ನೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದರು
04:03 PM Aug 15, 2024 IST | ಅಮೃತ ಮೈಸೂರು
Advertisement

ನವದೆಹಲಿ,ಆ.15: ಭಾರತವು ಯಾವಾಗಲೂ ನಮ್ಮ ನೆರೆಯ ದೇಶಗಳು ಸಮೃದ್ಧಿ ಮತ್ತು ಶಾಂತಿಯ ಹಾದಿಯಲ್ಲಿ ಮುನ್ನಡೆಯ ಬೇಕೆಂದು ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

Advertisement

78 ನೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ
ಕೆಂಪು ಕೋಟೆಯಲ್ಲಿ ದೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಬಾಂಗ್ಲಾದೇಶದಲ್ಲಿನ ರಾಜಕೀಯ ಅಶಾಂತಿ, ಅಲ್ಲಿನ ಹಿಂದೂಗಳ ಸುರಕ್ಷತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ಬಾಂಗ್ಲಾದಲ್ಲಿ ತ್ವರಿತವಾಗಿ ಶಾಂತಿಯ ಮರುಸ್ಥಾಪನೆಯಾಗಲಿ ಎಂದು ಜನ ಬಯ ಸುತ್ತಿದ್ದಾರೆ,ಅಲ್ಲಿನ ಪರಿಸ್ಥಿತಿಯು ಶೀಘ್ರವೇ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ವಿಶ್ವಾಸ‌ ವ್ಯಕ್ತಪಡಿಸಿದರು.

ನೆರೆಯ ರಾಷ್ಟ್ರದಲ್ಲಿ ಆದ ಹಿಂಸಾಚಾರ ಸ್ವರೂಪವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅಲ್ಲಿನ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಸುರಕ್ಷತೆಯನ್ನು ಬಯಸುತ್ತೇನೆ ಭಾರತದ 140 ಕೋಟಿ ಜನ ಅಲ್ಲಿನ ಹಿಂದೂಗಳ ಬಗ್ಗೆ ಆತಂಕದಲ್ಲಿದ್ದಾರೆ ಎಂದು ‌ಮೋದಿ ಹೇಳಿದರು.

Advertisement
Tags :
NavadehaliPM Modi
Advertisement
Next Article