For the best experience, open
https://m.navayuganews.com
on your mobile browser.
Advertisement

KSDMF : ಡಿಜಿಟಲ್ ಮಾಧ್ಯಮಕ್ಕೆ ಶಕ್ತಿ ತುಂಬಿದ ಸಿಎಂ, ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್'ಗೆ ಸನ್ಮಾನ, ಡಿಜಿಟಲ್ ಮಾಧ್ಯಮ ಸಮ್ಮೇಳನಕ್ಕೆ ಚಿಂತನೆ

ಬೆಂಗಳೂರು : ಇದೇ ಮೊದಲ ಬಾರಿಗೆ ರಾಜ್ಯ ಡಿಜಿಟಲ್ ಮಾಧ್ಯಮಗಳಿಗೆ ಸರ್ಕಾರಿ ಜಾಹಿರಾತು ನೀಡಲು ಕರ್ನಾಟಕ ಡಿಜಿಟಲ್ ಜಾಹಿರಾತು ನೀತಿ - 2024 ಜಾರಿಗೆ ಬಂದಿರುವುದರಿಂದ ನಮಗೆ ಬಲ ಬಂದತಾಗಿದೆ. ಇದನ್ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಬೆಂಗಳೂರಿನಲ್ಲಿ ವಿಭಿನ್ನವಾಗಿ ಡಿಜಿಟಲ್ ಮಾಧ್ಯಮ ಸಮ್ಮೇಳನ ಅಯೋಜಿಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪತ್ರಕರ್ತರನ್ನು ಅಹ್ವಾನಿಸುವ ಯೋಜನೆ ನಮ್ಮ ಮುಂದಿದೆ ಎಂದು ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಫೋರಂ (KSDMF) ಅಧ್ಯಕ್ಷರಾದ ಬಿ. ಸಮೀವುಲ್ಲಾ ಅವರು ಹೇಳಿದ್ದಾರೆ.

Advertisement

ಕೆಎಸ್'ಡಿಎಂಎಫ್ ವತಿಯಿಂದ ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಮತ್ತು ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಿಜಿಟಲ್ ಮಾಧ್ಯಮ ನೀತಿ-2024 ಜಾರಿಯಾದ ನಂತರ ಟಿವಿ, ಪತ್ರಿಕೆಗಳಂತೆ ಡಿಜಿಟಲ್ ಮಾಧ್ಯಮವು ಈಗ ಅಧಿಕೃತವಾಗಿ ಪತ್ರಿಕಾ ಮಾಧ್ಯಮವಾಗಿ ಹೊರಹೊಮ್ಮಿತು. ಇತರ ರಾಜ್ಯಗಳಲ್ಲಿ ಡಿಜಿಟಲ್ ಮಾಧ್ಯಮ ನೀತಿ ಇದೆಯಾದರೂ ನಮ್ಮ ರಾಜ್ಯದ ಡಿಜಿಟಲ್ ಮಾಧ್ಯಮ ನೀತಿ ಸಮಗ್ರವಾಗಿರುವುದಲ್ಲದೇ ವೃತ್ತಿಪರವಾಗಿ ರಚನೆಯಾಗಿದೆ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರು ಸಹಕಾರ ಮತ್ತು ಸತತ ಪ್ರಯತ್ನದ ಫಲವಾಗಿ ಕಡಿಮೆ ಅವಧಿಯಲ್ಲಿ ಇಂದು ಡಿಜಿಟಲ್ ಮಾಧ್ಯಮ ನೀತಿ ಜಾರಿಗೆ ಬಂದಿದೆ. ಭವಿಷ್ಯದ ಡಿಜಿಟಲ್ ಮಾಧ್ಯಮ ನೈಜ ಪತ್ರಿಕೋದ್ಯಮ, ನಿಷ್ಪಪಕ್ಷಪಾತ ಮತ್ತು ಮಾನವೀಯತೆಯ ಪರ್ಯಾಯ ಪತ್ರಿಕೋದ್ಯಮವಾಗಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.

ಇದೇ ವೇಳೆ ಕೆಎಸ್'ಡಿಎಂಎಫ್'ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರು ಫೋರಂ ಅಧ್ಯಕ್ಷರಾದ ಸಮೀವುಲ್ಲಾ ಅವರ ವೃತ್ತಿ ಭಾಂದವ್ಯದ ಬಗ್ಗೆ ಮೆಲುಕು ಹಾಕಿದರು. ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜೊತೆ ಮಾತಾಡಿ, ಅವರಿಗೆ ಡಿಜಿಟಲ್ ಮಾಧ್ಯಮದ ಪ್ರಾಮುಖ್ಯತೆಯನ್ನು ವಿವರಿಸಿ ಈ ನೀತಿ ಜಾರಿಗೆಯ ಪ್ರಯತ್ನದ ಬಗ್ಗೆ ವಿವರಿಸಿದರು.

ಸಣ್ಣ ಸಣ್ಣ ಪತ್ರಿಕೆಗಳಂತೆ ಡಿಜಿಟಲ್ ಮಾಧ್ಯಮಗಳನ್ನು ಬೆಂಬಲಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಡಿಜಿಟಲ್ ಮಾಧ್ಯಮಗಳಿಗೂ ಸರ್ಕಾರಿ ಜಾಹಿರಾತು ನೀಡಲು ಹಣಕಾಸು ವೆಚ್ಚ, ಮಾಧ್ಯಮ ನೀತಿಯ ನೀಲನಕ್ಷೆ ಬಗ್ಗೆ ವಿವರಿಸಲಾಯಿತು. ಇದಕ್ಕೆ ಮುಖಮಂತ್ರಿಗಳ ಒಪ್ಪಿಗೆ ಸೂಚಿಸಿದ್ದಾರೆ. ಈ ಕಾರಣದಿಂದಲೇ ರಾಜ್ಯದ ಡಿಜಿಟಲ್ ಮಾಧ್ಯಮಗಳಿಗೆ ಸರ್ಕಾರಿ ಜಾಹಿರಾತು ನೀತಿ ತರಲು ಸಾಧ್ಯವಾಯಿತು ಎಂದರು.

ಈಗಾಗಲೇ ಪತ್ರಕರ್ತರಿಗೆ ಅರೋಗ್ಯ ವಿಮೆ, ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ದಿನ ಪತ್ರಿಕೆ ಹಂಚುವವರಿಗೆ ಅನುಕೂಲಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿದ್ದಾರೆ. ಇನ್ನು ಡಿಜಿಟಲ್ ಮಾಧ್ಯಮದವರಿಗೂ ವಾರ್ತಾ ಇಲಾಖೆಯಿಂದ ಗುರುತಿನ ಚೀಟಿ ಮಾಧ್ಯಮ ಪತ್ರ ನೀಡಲು ಆಯುಕ್ತರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಮತಾನಾಡಿ ಇಂದಿನ ಡಿಜಿಟಲ್ ಮಾಧ್ಯಮಕ್ಕೆ ಕೆಎಸ್'ಡಿಎಂಎಫ್ ಅತ್ಯವಶ್ಯಕವಾಗಿ ಬೇಕಿತ್ತು. ಇದರಿಂದ ವೃತ್ತಿಪರ ಪತ್ರಕರ್ತರಿಗೆ ಹೆಚ್ಚಿನ ಅನುಕೂಲಗಳು ಸಿಗಲಿವೆ ಎಂದರು.

ಸಮಾರಂಭದಲ್ಲಿ ಫೋರಂನ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಟಿವಿ ಶಿವಕುಮಾರ್, ಜಂಟಿಕಾರ್ಯದರ್ಶಿಗಳಾದ ಸುದ್ದಿ ಒನ್ ಮಾಲತೇಶ್ ಅರಸ್ ಹರ್ತಿಕೋಟೆ, ರಜನಿ ಎಕ್ಸ್ ಪ್ರೈಸ್ ರಜಿನಿ, ಖಜಾಂಚಿ ಸಾಕ್ಷ್ಯ ಟಿವಿ ಸನತ್ ರೈ, ಉಪಾಧ್ಯಕ್ಷ ಸುನೀಲ್ ಶಿರಸಿಂಗಿ, ಹಿರಿಯ ಪತ್ರಕರ್ತ ರವೀಂದ್ರ ಜೋಶಿ, ಹಮೀದ್ ಪಾಳ್ಯ, ಪ್ರತಿಧ್ವನಿ ಶಿವಕುಮಾರ್, ವಿಜಯ್ ಭರಮಸಾಗರ, ನ್ಯಾಷನಲ್ ಟಿವಿ ಮಂಜು ಬಾಣಗೆರೆ, ಶಿವಪ್ರಸಾದ್, ನವಯುಗ ನ್ಯೂಸ್ ವೆಂಕಟರೆಡ್ಡಿ.ಕೆ, ಮುತ್ತುರಾಜ್, ಶ್ಯಾಮ್, ರಮೇಶ್, ದರ್ಶನ್, ಹರ್ಶವರ್ಧನ್ ಸೇರಿದಂತೆ ಹಲವರು ಸೇರಿದ್ದರು.

Advertisement
Tags :
Advertisement