For the best experience, open
https://m.navayuganews.com
on your mobile browser.
Advertisement

ಬೆಂಗಳೂರು : ಇನ್ನು ಮುಂದೆ ಟಿವಿ ವಾಹಿನಿ ಮತ್ತು ಪತ್ರಿಕೆಗಳಂತೆ ಡಿಜಿಟಲ್ ಮಾಧ್ಯಮಗಳಿಗೂ ಸರ್ಕಾರಿ ಜಾಹಿರಾತು ನೀಡಲು ಅನುಮತಿ ದೊರೆತ ಹಿನ್ನೆಲೆ ಇದಕ್ಕೆ ಸಹಕರಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಮತ್ತು ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರಿಗೆ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಫೋರಂ (ಕೆಎಸ್'ಡಿಎಂಎಫ್) ವತಿಯಿಂದ ಅಭಿನಂದನಾ ಸಮಾರಂಭವನ್ನು ಮಂಗಳವಾರ ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಹಲವು ವರ್ಷಗಳಿಂದ ಡಿಜಿಟಲ್ ಮಾಧ್ಯಮಗಳಿಗೆ ಸರ್ಕಾರಿ ಜಾಹಿರಾತು ನೀಡಲು ಅನುಮತಿ ನೀಡುವಂತೆ ಫೋರಂ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದು, ಇದೀಗ ಡಿಜಿಟಲ್ ಮಾಧ್ಯಮಗಳಿಗೆ ಜಾಹಿರಾತು ನೀಡುವ ಸಂಬಂಧ ಒಪ್ಪಿಗೆ ಸೂಚಿಸಿರುವುದು ಸಂತಸದ ಕ್ಷಣವಾಗಿದೆ. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸಿ ಈ ನೀತಿ ಜಾರಿಯಾಗಲು ಶ್ರಮಿಸಿದ ಸಿಎಂ ಮಾಧ್ಯಮ ಕಾರ್ಯದರ್ಶಿ ಮತ್ತು ವಾರ್ತಾ ಇಲಾಖೆಯ ಆಯುಕ್ತರಿಗೆ ಫೋರಂ ಅಧ್ಯಕ್ಷ ಬಿ. ಸಮೀವುಲ್ಲಾ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

Advertisement

ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಡಿಜಿಟಲ್ ಮಾಧ್ಯಮದವರಿಗೂ ಆಹ್ವಾನವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮೀವುಲ್ಲಾ ಅವರು ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

- ಕೆ.ಎಂ ಶಿವಕುಮಾರ್, KSDMF ಕಾರ್ಯದರ್ಶಿ ( ಕರ್ನಾಟಕ ಟಿವಿ ) 7204490507

- ವಸಂತ್ ಕುಮಾರ್, KSDMF ಉಪಾಧ್ಯಕ್ಷರು ( ಕನ್ನಡ ನ್ಯೂಸ್ ನೌ )- 9738123234

- ಮಾಲ್ತೇಶ್, KSDMF ಜಂಟಿ ಕಾರ್ಯದರ್ಶಿ 9480472030

- ರಜನಿ, KSDM ಜಂಟಿ ಕಾರ್ಯದರ್ಶಿ - 9606576789

Advertisement
Tags :
Advertisement