HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಯುದ್ಧ ತಪ್ಪಿಸಿ ಶಾಂತಿ ಸ್ಥಾಪಿಸಲು ಗಾಂಧೀಜಿ ಅಹಿಂಸಾ ತತ್ವ ಪಾಲಿಸಿ:ದಿನೇಶ್

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ‌ ಗಾಂಧೀಜಿ ಮತ್ತು ಲಾಲ್‌ಬಹದ್ದೂರ್‌ ಶಾಸ್ತ್ರಿಅವರ ಜನ್ಮದಿನ ಆಚರಿಸಲಾಯಿತು
07:43 PM Oct 02, 2024 IST | ಅಮೃತ ಮೈಸೂರು
Advertisement

ನಂಜನಗೂಡು: ಯುದ್ಧಗಳನ್ನು ತಪ್ಪಿಸಿ ಶಾಂತಿಯನ್ನು ಸ್ಥಾಪಿಸಬೇಕಾದರೆ ಗಾಂಧೀಜಿಯವರ ಅಹಿಂಸಾ ತತ್ವವನ್ನು ಅನುಸರಿಸಬೇಕು ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಅವರು ಕರೆ ನೀಡಿದರು.

Advertisement

ಗಾಂಧೀ ಜಯಂತಿಯ ಪ್ರಯುಕ್ತ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ಅಕ್ಕಪಕ್ಕದ ರಾಷ್ಟ್ರಗಳು ವೈರತ್ವ ರೂಡಿಸಿಕೊಳ್ಳುತ್ತಿವೆ ಹಾಗಾಗಿ ಇಂದು ಪ್ರಪಂಚದಲ್ಲಿ ಯುದ್ಧಗಳು ಸಂಭವಿಸುತ್ತಿದೆ,
ಯುದ್ಧಗಳನ್ನು ತಪ್ಪಿಸಿ ಶಾಂತಿಯನ್ನು ಸ್ಥಾಪಿಸ ಬೇಕಾದರೆ ಗಾಂಧೀಜಿಯವರ ಅಹಿಂಸಾ ತತ್ವವನ್ನು ಅನುಸರಿಸಬೇಕು,ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರಪಂಚದಲ್ಲಿ ಅಶಾಂತಿ ಉಂಟಾಗಿ ಜಗತ್ತೇ ನಾಶವಾಗುವ ಸಂಭವ ಬರಬಹುದು ಎಂದು ಹೇಳಿದರು.

ಶಾಂತಿ ಸ್ಥಾಪನೆ ಉದ್ದೇಶದಿಂದ ವಿಶ್ವ ಸಂಸ್ಥೆಯು ಗಾಂಧೀಜಿಯವರ ಜನ್ಮದಿನಾಚರಣೆಯ ದಿನದಂದು ವಿಶ್ವ ಅಹಿಂಸಾ ದಿನ ಎಂದು ಘೋಷಣೆ ಮಾಡಿದೆ ಎಂದು ಹೇಳಿದರು.

ಇಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಸಹ ಆಚರಣೆ ಮಾಡುತ್ತಿದ್ದೇವೆ. ಶಾಸ್ತ್ರಿಯವರ ಮುಖ್ಯಘೋಷಣೆ ಆಹಾರ ಸಂರಕ್ಷಣೆ. ಆಹಾರವನ್ನು ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಪೋಲು ಮಾಡಬಾರದು ಎಂದು ಸಲಹೆ ನೀಡಿದರು ದಿನೇಶ್.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಕರಾದ ಅಶ್ವತ ನಾರಾಯಣಗೌಡ , ಲಿಂಗಣ್ಣಸ್ವಾಮಿ ,ರಂಗಸ್ವಾಮಿ ನಾಗರಾಜು ಸ್ವಾಮಿಗೌಡ ,ಟಿ.ಕೆ ರವಿ ,ಸುಮಾ, ಮೀನಾ ,ರೂಪ ಸುಮಿತ್ರ ವಸಂತಕುಮಾರಿ ,ಮಿಲ್ಟನ್ ಹರ್ಷಿತ್, ನಾಗರಾಜ ರೆಡ್ಡಿ, ಹರೀಶ್, ಬಿಂದು ,ಚೇತನ್ ಮತ್ತುತರರು ಹಾಜರಿದ್ದರು.

Advertisement
Tags :
GandhiMysoreNanjanagudu
Advertisement
Next Article