ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ
ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್ ಪದಗ್ರಹಣ ಮಾಡಿದ್ದು, ಸಂವಿಧಾನವನ್ನು ರಕ್ಷಿಸಿ ಬೆಂಬಲಿಸುವುದಾಗಿ ಶಪಥ ಸ್ವೀಕರಿಸಿದರು.
07:49 PM Aug 09, 2024 IST
|
ಅಮೃತ ಮೈಸೂರು
Advertisement
ಢಾಕಾ,ಆ.9: ಶೇಖ್ ಹಸೀನಾ ಪದಚ್ಯುತಿಯ ಬೆನ್ನಲ್ಲೇ ಬಾಂಗ್ಲಾದಲ್ಲಿ ಆರ್ಥಿಕ ತಜ್ಞ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ
ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್ ಪದಗ್ರಹಣ ಮಾಡಿದ್ದು, ಸಂವಿಧಾನವನ್ನು ರಕ್ಷಿಸಿ ಬೆಂಬಲಿಸುವುದಾಗಿ ಶಪಥ ಸ್ವೀಕರಿಸಿದರು.
Advertisement
ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು, ಮೊಮ್ಮಕ್ಕಳಿಗೆ ಮೀಸಲಾತಿ ಘೋಷಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಭಾರೀ ಹೋರಾಟ ನಡೆಸಿದ್ದರು.
ಸಂಸತ್ ಭವನ ಹಾಗೂ ಪ್ರಧಾನಿ
ಶೇಖ್ ಹಸೀನಾ ಮನೆಯನ್ನು ಲೂಟಿ ಮಾಡಿದರು.ಪ್ರತಿಭಟನೆ ತೀವ್ರ ಸ್ವರೂಪ ಪಡೆದಕೂಡಲೇ ಹಸೀನಾ ರಾಜೀನಾಮೆ ಸಲ್ಲಿಸಿ ಭಾರತದತ್ತ ಪಲಾಯನ ಮಾಡಿದರು.
ಶೇಖ್ ಹಸೀನಾ ರಾಜೀನಾಮೆ ನೀಡಿದ ಒಂದೆರಡು ದಿನಗಳಲ್ಲೇ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಪರಿಸ್ಥಿತಿ ತಹಬದಿಗೆ ಬಂದಿದೆ.
Advertisement
Next Article