ರೋಟರಿ ಆಸರೆ ರಕ್ತ ಕೇಂದ್ರಕ್ಕೆ ಚಾಲನೆ ನೀಡಿದ ಜಿಲ್ಲಾ ಗೌವರ್ನರ್ ಮಹಾದೇವ ಪ್ರಸಾದ್
ಬೆಂಗಳೂರು, ಜ.16 : ನಗರದ ಚಾಮರಾಪೇಟೆಯಲ್ಲಿ ರೋಟರಿ ಆಸರೆ ರಕ್ತ ಕೇಂದ್ರದ ಸೇವೆಗೆ ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3192 ಯ ಗೌವರ್ನರ್ ಎನ್ ಎಸ್ ಮಹದೇವ ಪ್ರಸಾದ್ ಚಾಲನೆ ನೀಡಿದರು.

ಬೆಂಗಳೂರು ನಗರ ಬೆಳೆಯುತ್ತಿದ್ದಂತೆ ಜನಸಂಖ್ಯೆಯು ಹೆಚ್ಚಾಗುತ್ತಿದೆ. ಇಲ್ಲಿ ಹಲವು ರಕ್ತ ಕೇಂದ್ರಗಳು ಇದ್ದರು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ರಕ್ತದ ಕೊರತೆ ಉಂಟಾಗುತ್ತಿದೆ. ಈ ಅತ್ಯಾಮೂಲ ಜೀವ ದ್ರವ ಪೂರೈಸುವ ಶ್ರೇಷ್ಠ ಕೆಲಸವನ್ನು ರಕ್ತ ಕೇಂದ್ರಗಳು ಮಾಡುತ್ತಿವೆ. ಈಗ ಸೇವಾ ಕಾರ್ಯಕ್ಕೆ ರೋಟರಿ ಅಂತರರಾಷ್ಟ್ರೀಯ ಜೆಲ್ಲೆಯ ರೋಟರಿ ಬೆಂಗಳೂರು ಮಾಲ್ಗುಡಿ ಸಹಯೋಗದಲ್ಲಿ ಬೆಂಗಳೂರು ರೋಟರಿ ಆಸರೆ ಕ್ಲಬ್ ನಗರದ ಹೃದಯ ಭಾಗದಲ್ಲಿ ರಕ್ತ ಕೇಂದ್ರ ಪ್ರಾರಂಭಿಸಿ ಇಂದಿನಿಂದಲೇ ಸೇವೆ ನೀಡುತ್ತಿದೆ. ಇದೇ ವೇಳೆ ಹಲವರು ರಕ್ತ ಕೇಂದ್ರದಲ್ಲಿ ರಕ್ತದಾನ ಮಾಡಿದರು.

ನೂತನ ರಕ್ತ ಕೇಂದ್ರದ ಡೋನರ್ ವಿಭಾಗ, ಸ್ಟೊರೇಜ್ ವಿಭಾಗ, ರಕ್ತ ಪರೀಕ್ಷೆ ವಿಭಾಗ ಎಲ್ಲವು ಕೂಡ ಅತ್ಯುತ್ತಮ ಗುಣಮಟ್ಟದಿಂದ ಕೂಡಿದ್ದು, ನುರಿತ ಲಾಬ್ ಟೆಕ್ನಿಷಿಯನ್ನರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಉತ್ತಮ ಸೌಲಭ್ಯ ಉಳ್ಳ ಮೊಬೈಲ್ ರಕ್ತದಾನ ವಾಹನವೂ ಕಾರ್ಯ ನೀರ್ವಹಿಸುತ್ತಿದೆ.

ರೋಟರಿ ಬೆಂಗಳೂರು ಆಸರೆ ಕ್ಲಬ್'ನ ಅಧ್ಯಕ್ಷರಾದ ರಾಘವೇಂದ್ರ ಎಂ.ಡಿ ಅವರು ಹಲವು ವರ್ಷಗಳಿಂದ ರಕ್ತ ಕೇಂದ್ರ ವಿಭಾಗದಲ್ಲಿ ಪರಿಣಿತಿ ಹೊಂದಿದ್ದು, ರಾಘವೇಂದ್ರ ಎಂ.ಡಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ರೋಟರಿ ರಕ್ತ ಕೇಂದ್ರ ಕಾರ್ಯ ನಿರ್ವಹಿಸಲಿದೆ ಇವರಿಗೆ ಆಸರೆ ಕ್ಲಬ್'ನ ಕಾರ್ಯದರ್ಶಿ ರಘುಕುಮಾರ್ ಆರ್, ಖಾಜಾಂಚಿ ದಿವ್ಯ ಅವರು ಸಹಕಾರ ನೀಡುತ್ತಿದ್ದಾರೆ. ಜೊತೆಗೆ ಆಸರೆ ತಂಡದ ಸದಸ್ಯರು ಇದ್ದರು.


ಈ ಕಾರ್ಯಕ್ರಮದಲ್ಲಿ ರೋಟರಿ ಇಂಟರ್ ನ್ಯಾಷನಲ್ ಡೈರೆಕ್ಟರ್ ಎಲೈಟ್ ಎಫ್ಎಲ್ಟಿ, ಎಲ್ಟಿ, ಕೆ.ಪಿ ನಾಗೇಶ್, ಐಪಿಡಿಜಿ ಶ್ರೀನಿವಾಸ್ ಮೂರ್ತಿ, ಪಿಜಿಡಿ ಕೆ ಎಸ್ ನಾಗೇಂದ್ರ, ಜೋನ್ ಗೌವರ್ನರ್ ರಶ್ಮಿ ತಂಕಸಾಲಿ, ಜೆಡ್ ಎಸ್ ಪವನ್ ಕುಮಾರ್, ಎಜಿ ಬಾಲಾಜಿ ನಾನಾಬಲ, ರೋಟರಿ ಬೆಂಗಳೂರು ಮಾಲ್ಗುಡಿ ಅಧ್ಯಕ್ಷ, ಜಿಆರ್ ಕ್ಯಾಪ್ಟನ್ ಶ್ರೀಕಾಂತ್ ಹೆಗ್ಡೆ, ಆರ್'ಟಿಎನ್ ರುದ್ರೇಶ್ ಕೆಎಸ್, ಜಿಲ್ಲಾ ಕಾರ್ಯದರ್ಶಿ ಆರ್'ಟಿಎನ್ ನಿರಂಜನ್, ಡಿಎಸ್ ಆರ್'ಟಿನ್ ರಂಗನಾಥ್, ಆರ್'ಟಿನ್ ರೇಣುಕೇಶ್ವರ್, ಆರ್'ಟಿಎನ್ ಚಂದ್ರು ಭಾಗವಹಿಸಿ ಶುಭ ಹಾರೈಸಿದರು.