ಕುಸಿದು ಬಿದ್ದ ಕಾರವಾರ- ಗೋವಾ ಸಂಪರ್ಕ ಸೇತುವೆ:ನದಿಗೆ ಬಿದ್ದ ಲಾರಿ
ಸತತ ಮಳೆಗೆ ಕಾರವಾರ- ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬಳಿ ಕಾಳಿ ನದಿ ಸೇತುವೆ ಕುಸಿದು ಬಿದ್ದಿದೆ.
05:39 PM Aug 07, 2024 IST
|
ಅಮೃತ ಮೈಸೂರು
Advertisement
ಕಾರವಾರ,ಆ.7: ಸತತ ಮಳೆಗೆ ಕಾರವಾರ- ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬಳಿ ಕಾಳಿ ನದಿ ಸೇತುವೆ ಕುಸಿದು ಬಿದ್ದಿದೆ.
Advertisement
ಕಾರವಾರದಲ್ಲಿ ಕಾಳಿ ನದಿಗೆ ಕಟ್ಟಲಾಗಿದ್ದ ಸೇತುವೆ ಆ. 6ರ ಮಧ್ಯರಾತ್ರಿ ಕುಸಿದಿದೆ.ಅದೇ ಸಂದರ್ಭದಲ್ಲಿ ಕಾರವಾರದ ಮೂಲಕ ಗೋವಾಕ್ಕೆ ಸಾಗುತ್ತಿದ್ದ ಲಾರಿಯೊಂದು ನದಿಗೆ ಬಿದ್ದಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಲಾರಿಯ ಚಾಲಕನನ್ನು ರಕ್ಷಿಸಿದ್ದಾರೆ. ಮಧ್ಯರಾತ್ರಿಯೇ ಶಾಸಕ ಸತೀಶ್ ಸೈಲ್ ಧಾವಿಸಿ ಘಟನೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು
ಕಾಳಿ ನದಿಗೆ ಅಡ್ಡಲಾಗಿ 43 ವರ್ಷದ ಹಿಂದೆ ಕಟ್ಟಲಾಗಿತ್ತು.ತಮಿಳುನಾಡಿನ ಧರ್ಮಪುರಿಯ 37 ವರ್ಷದ ಬಾಲಮುರುಗನ್ ಎಂಬ ಚಾಲಕ ನದಿಗೆ ಬಿದ್ದರು.ತಕ್ಷಣ ಪೊಲೀಸರು, ಸ್ಥಳೀಯ ಮೀನುಗಾರರು ಅವರನ್ನು ರಕ್ಷಣೆ ಮಾಡಿ,ಆಸ್ಪತ್ರೆಗೆ ದಾಖಲಿಸಿದರು.
ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು,
ಲಾರಿ ಮೇಲೆತ್ತಲು ಹರಸಾಹಸ ಪಡಬೇಕಾಯಿತು.
Advertisement
Next Article