HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಪಾಕಿಸ್ತಾನ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ:26 ಮಂದಿ ದುರ್ಮರಣ

ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡಿದ್ದು,26 ಮಂದಿ ದುರ್ಮರಣ ಅಪ್ಪಿದ್ದಾರೆ.
05:48 PM Nov 09, 2024 IST | ಅಮೃತ ಮೈಸೂರು
Advertisement

ಇಸ್ಲಾಮಾಬಾದ್: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡಿದ್ದು,26 ಮಂದಿ ದುರ್ಮರಣ ಅಪ್ಪಿದ್ದಾರೆ.

Advertisement

ಶನಿವಾರ‌ ನೈಋತ್ಯ ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್ ಬಳಿ ಎರಡು ಪ್ರಭಲ ಬಾಂಬ್ ಗಳು ಸ್ಫೋಟಗೊಂಡಿದೆ.

ಈ ಬಗ್ಗೆ ಪೊಲೀಸ್ ಕಾರ್ಯಾಚರಣೆಯ ಹಿರಿಯ ಅಧೀಕ್ಷಕ ಮುಹಮ್ಮದ್ ಬಲೋಚ್ ಮಾತನಾಡಿ, ಪೇಶಾವರಕ್ಕೆ ಹೋಗುವ ಎಕ್ಸ್‌ಪ್ರೆಸ್‌ ರೈಲು ನಿಲ್ದಾಣದಿಂದ ಹೊರಡಲು ಸಿದ್ಧವಾಗಿತ್ತು. ಜೊತೆಗೆ ಪ್ಯಾಸೆಂಜರ್ ರೈಲಿಗಾಗಿ ಹಲವು ಜನ ಕಾಯುತ್ತಿದ್ದರು,ಹಾಗಾಗಿ ನಿಲ್ದಾಣ ಭಾರೀ ಜನಸಂದಣಿಯಿಂದ ಕೂಡಿತ್ತು, ಈ ವೇಳೆ ಒಂದರ ಹಿಂದೆ ಒಂದರಂತೆ ಎರಡು ಬಾಂಬ್ ಸ್ಫೋಟಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಬಾಂಬ್ ಸ್ಫೋಟಗೊಂಡಾಗ 4 ಜನ ಹಾಗೂ ಎರಡನೇ ಬಾಂಬ್ ಸ್ಫೋಟಗೊಂಡಾಗ 15 ರಿಂದ 26 ಜನರು ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿದೆ ಸ್ಫೋಟದಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿತು.

Advertisement
Tags :
Pakustan
Advertisement
Next Article