For the best experience, open
https://m.navayuganews.com
on your mobile browser.
Advertisement

ಬೆಂಗಳೂರು, ಡಿ.4 : ನಗರದ ಹಲವು ಚಿತ್ರಮಂದಿರಗಳಲ್ಲಿ ಮುಂಜಾನೆ 3 ಗಂಟೆಗೆ ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಪ್ಪ-2 ಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರ ಮಂದಿರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕರ್ನಾಟಕ ಸಿನಿಮಾ ರೆಗ್ಯೂಲೇಷನ್ ಕಾಯ್ದೆಯಡಿ ಮುಂಜಾನೆ 6:30ಕ್ಕಿಂತ ಮುಂಚೆ ಮತ್ತು ರಾತ್ರಿ 10:30 ನಂತರ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ. ಈ ನಿಯಮವನ್ನು ಮೀರಿ ಚಿತ್ರ ಪ್ರದರ್ಶಿಸಿದ ಬೆಂಗಳೂರಿನ 42 ಚಿತ್ರಮಂದಿರಗಳ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಅಧೀನ ಅರಕ್ಷಕರಿಗೆ ಸೂಚಿಸಿದ್ದಾರೆ.

Advertisement

ಅಂತರ್ಜಾಲ ಬುಕ್ ಮೈ ಶೋ ಆನ್‌ಲೈನಿನಲ್ಲಿ ನಿಯಮಬಾಹಿರವಾಗಿ, ಅನಧಿಕೃತವಾಗಿ ನಿಗಧಿತ ಅವಧಿಯ ಪೂರ್ವ ಪ್ರದರ್ಶನ ಮಾಡುತ್ತಿರುವುದು ಕಂಡ ಬಂದ ಹಿನ್ನೆಲೆ ಪುಪ್ಪ ಚಿತ್ರ ಪ್ರದರ್ಶಿಸುತ್ತಿರುವ 42 ಚಿತ್ರಮಂದಿರಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

Advertisement
Tags :
Advertisement