HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

82 ನೇ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ:ಬಿಎಸ್ ವೈ ವಿರುದ್ಧ ಸಿಎಂ ಗರಂ

ಮೈಸೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದರು. ಸಚಿವರಾದ ಮಹದೇವಪ್ಪ,ವೆಂಕಟೇಶ್ ಇದ್ದರು.
01:19 PM Aug 07, 2024 IST | ಅಮೃತ ಮೈಸೂರು
Advertisement

ಮೈಸೂರು,ಆ.7: ಯಡಿಯೂರಪ್ಪನವರು ಕೋರ್ಟ್ ದಯದಿಂದ ಹೊರಗಡೆ ಇದ್ದಾರೆ,
ಈ ವಯಸ್ಸಿನಲ್ಲಿ ಫೋಕ್ಸೋ ಕೇಸ್ ಹಾಕಿಸಿಕೊಂಡಿದ್ದಾರೆ,82 ನೇ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ ಎಂದು ಸಿಎಂ ಸಿದ್ದರಾಮಯ್ಯ‌ ಟಾಂಗ್ ನೀಡಿದರು.

Advertisement

ಮೈಸೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿಎಂ ರಾಜೀನಾಮೆ ಎಂಬ ಯಡಿಯೂರಪ್ಪ ಹೇಳಿಕೆಗೆ ಗರಂ ಆದರು.

82 ನೇ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ,
ಅವರು ರಾಜಕೀಯ ನಿವೃತ್ತಿ ಆಗಬೇಕಿತ್ತು, ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರು ಚೆಕ್ ಮೂಲಕ ಹಣ ಪಡೆದಿದ್ದರು,ಡಿನೋಟಿಫಿಕೇಷನ್ ಮಾಡಿದ್ದರು,ಅವರ ಪ್ರಕರಣವೇ ಬೇರೆ ನನ್ನ ಪ್ರಕರಣವೇ ಬೇರೆ.
ನನ್ನ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪ ಅವರಿಗಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಜೆಡಿಎಸ್ ನವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ,ನನ್ನ ಟಾರ್ಗೆಟ್ ಮಾಡಿ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ,ಇವರ ಸುಳ್ಳುಗಳಿಂದ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ,
ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ‌ ಎಂದು ತಿರುಗೇಟು ನೀಡಿದರು.

ಜನರ ಇವರ ಸುಳ್ಳನ್ನು ನಂಬುವುದಿಲ್ಲಾ,
ಈ ಹಿಂದೆ ಆಪರೇಶನ್ ಕಮಲ ಮಾಡಲು ಪ್ರಯತ್ನ ಮಾಡಿದ್ದರು,ಅದು ವಿಫಲ ಆಯ್ತು,
ಈಗ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ,ಏನೇನು ಮಾಡ್ತಾರೋ ಮಾಡಲಿ ಏನೂ ಆಗಲ್ಲಾ ಎಂದು ವಿಶ್ವಾಸ ವ್ಯಕ್ತಪಡಿಸಿದರು ಸಿದ್ದು.

ರಾಜ್ಯಪಾಲರಿಂದ ನನಗೆ ಬಂದಿರುವುದು ಒಂದೇ ನೋಟಿಸ್,ಅದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ,ಮುಖ್ಯ ಕಾರ್ಯದರ್ಶಿಗಳು, ರಾಜ್ಯಪಾಲರ ಭೇಟಿ ಮಾಡಿದ್ದೇ ಬೇರೆ ವಿಚಾರಕ್ಕೆ,ಅವರ ಭೇಟಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸಿಎಸ್ ಹೊಸದಾಗಿ ನೇಮಕವಾದ ಹಿನ್ನಲೆಯಲ್ಲಿ ರಾಜ್ಯಪಾಲರನ್ನ ಭೇಟಿ ಆಗಿದ್ದಾರೆ,ಕಾನೂನಾತ್ಮಕವಾಗಿ ನನ್ನ ತಪ್ಪಿಲ್ಲ ಅಂತ ರಾಜ್ಯಪಾಲರು ಕನ್ವಿನ್ಸ್ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಿಎಂ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಮುಡಾ ಹಗರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ,ನಾನು 2014 ರಲ್ಲಿ ಸಿಎಂ ಆಗಿದ್ದಾಗ ನನ್ನ ಹೆಂಡತಿ ಅರ್ಜಿ ಹಾಕಿದ್ದಳು,
ಅದನ್ನ ಮುಡಾ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದರು,
ನಾನು ಸಿಎಂ ಆಗಿರುವಾಗ ಒಂದು ಗುಂಟೆ ಜಾಗವನ್ನು ಕೊಡಬೇಡಿ ಎಂದಿದ್ದೆ.

ಮತ್ತೆ 2021 ರಲ್ಲಿ ಅರ್ಜಿ ಹಾಕಿದ್ದಾಳೆ
ಆಗ ಬಿಜೆಪಿ ಸರ್ಕಾರ ಇತ್ತು ಅವರು ಕಾನೂನು ರೀತಿಯಲ್ಲಿ ಬದಲಿ ಸೈಟ್ ಕೊಟ್ಟಿದ್ದಾರೆ,ನಾನು ಸೈಟು ಪಡೆಯಬೇಕು ಎಂಬ ಉದ್ದೇಶವಿದ್ದರೆ ಸಿಎಂ ಆಗಿದ್ದಾಗ ನಾನೇ ಸೈಟ್ ಕೊಡಿಸುತ್ತಿದ್ದೆ ಎಂದು ತಿಳಿಸಿದರು.

ಸಿಎಂ ಆಗಿ ನನಗೆ ಅಧಿಕಾರ ಇತ್ತು,
ನಾನೇ ಪ್ರಭಾವ ಬಳಸಿ ಸೈಟು ಕೊಡಬಹುದಿತ್ತು,ನಾನು ಆ ರೀತಿ ಮಾಡಿಲ್ಲ ಎಂದು ವಿವರಿಸಿದರು.

ನಾಳಿದ್ದು ಮೈಸೂರಿನಲ್ಲಿ ಸಮಾವೇಶ ಇದೆ,
ಎಲ್ಲರ ಹಗರಣವನ್ನು ನಿಮ್ಮ ಮುಂದೆ ಇಡುತ್ತೇನೆ,ಅದಕ್ಕಾಗಿ ಇಂದು ಪ್ರೆಸ್ ಮೀಟ್ ಕ್ಯಾನ್ಸಲ್ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

Advertisement
Tags :
CM SiddaramaiahMysore
Advertisement
Next Article