HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಬೆಕ್ಕು ಕಚ್ಚಿ ಮಹಿಳೆ ಸಾವು:ವಿಚಿತ್ರ ಆದರೂ ನಿಜ

08:07 PM Aug 09, 2024 IST | ಅಮೃತ ಮೈಸೂರು
Advertisement

ಶಿವಮೊಗ್ಗ, ಆ.9: ಬೆಕ್ಕು, ನಾಯಿಗಳನ್ನು ಸಾಕುವವರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ.ಆದರೆ ಇದು ವಿಚಿತ್ರವೆನುಸಿದರೂ ನಿಜ.

Advertisement

ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಕ್ಕು, ನಾಯಿಗಳನ್ನು ಸಾಕುವುದು ಹೆಚ್ಚಾಗಿದೆ,ಈ ವಿಚಿತ್ರ ಘಟನೆ ಓದಿ ಸಾಕು ಪ್ರಾಣಿಗಳ ಮಾಲೀಕರು ಎಚ್ಚೆತ್ತುಕೊಳ್ಳಲಿ ಎಂಬುದು ನಮ್ಮ ಹಾರೈಕೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ಈ ದುರಂತವೊಂದು ನಡೆದು ಹೋಗಿದೆ.

ಅದೇನೆಂದರೆ ಬೆಕ್ಕು ಕಚ್ಚಿದ್ದರಿಂದ ಮಹಿಳೆ ಮೃತಪಟ್ಟಿದ್ದಾರೆ. ತರಲಘಟ್ಟದ ವಾಸಿ ಗಂಗೀಬಾಯಿ (50) ಬೆಕ್ಕು ಕಚ್ಚಿ ಮೃತಪಟ್ಟ ಮಹಿಳೆ.

ಇದೇ ಬೆಕ್ಕು ಸ್ವಲ್ಪ ದಿನಗಳ ಹಿಂದೆ ತರಲಘಟ್ಟದ ಕ್ಯಾಂಪ್ ನಲ್ಲಿದ್ದ ಯುವಕನೊಬ್ಬನ ಮೇಲೆ ದಾಳಿ ಮಾಡಿತ್ತಂತೆ.

ಎರಡು ತಿಂಗಳ ಹಿಂದೆ ಗಂಗೀಬಾಯಿ ಎಂಬಾಕೆಯ ಕಾಲಿಗೆ ಬೆಕ್ಕು ಕಚ್ಚಿದೆ,ಹಾಗಾಗು ಆಕೆ ಗಾಯಗೊಂಡಿದ್ದರು,ಹಿರಿಯರ ಸಲಹೆ ಮೇರೆಗೆ ಒಂದು ಇಂಜಕ್ಷನ್ ಪಡೆದು ಗುಣಮುಖರಾಗಿದ್ದರು.

ಆದರೆ ಕೆಲ ದಿನಗಳ ಹಿಂದೆ ಆಕೆಯ ಆರೋಗ್ಯ ಹದಗೆಟ್ಟು ಮಹಿಳೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದರು,ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬೆಕ್ಕು ಕಚ್ಚಿ ಗಾಯಗೊಂಡಿದ್ದ ಮಹಿಳೆ 5 ಇಂಜಕ್ಷನ್ ತೆಗೆದುಕೊಳ್ಳಬೇಕಿತ್ತಂತೆ, ಆದರೆ ಆಕೆ ಒಂದೇ ಇಂಜಕ್ಷನ್ ತೆಗೆದುಕೊಂಡು ಗುಣಮುಖನಾಗಿದ್ದೇನೆ ಎಂದು ಸುಮ್ಮನಾಗಿದ್ದರು.

ಆಕೆಯ ದೇಹದಲ್ಲಿ ನಂಜು ಏರತೊಡಗಿ ಮಹಿಳೆ ಗಂಭೀರ ಸ್ಥಿತಿ ತಲುಪಿ ಆಸ್ಪತ್ರೆಗೆ ದಾಖಲಾದರು,ಆದರೆ ಮೃತಪಟ್ಟರು.ಆಕೆಯ ಸಾವಿಗೆ ರೇಬಿಸ್ ಕಾರಣ ಎಂಬುದು ಗೊತ್ತಾಗಿದೆ.

Advertisement
Tags :
Cat bittenShivamoga
Advertisement
Next Article