For the best experience, open
https://m.navayuganews.com
on your mobile browser.
Advertisement

ಮೈಸೂರು: ಉಪಚುನಾವಣ ಪ್ರಚಾರದ ವೇಳೆ ಸಚಿವ ಜಮೀರ್ ಅಹಮದ್ ಖಾನ್,ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿಯವರ ಬಗ್ಗೆ ಕೀಳಾಗಿ ನಿಂದಿಸಿರುವುದು ಖಂಡನೀಯ ಎಂದು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ಮತ್ತು ರಾಜ್ಯ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿವೆ.

Advertisement

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ ಜಿ ಗಂಗಾಧರ್ ಮಾತನಾಡಿ,ಜಮೀರ್ ಹೇಳಿಕೆ
ಕೇವಲ ವ್ಯಕ್ತಿಗತವಲ್ಲದೆ ಜಾತಿನಿಂದನೆ ಯಾಗಿದೆ ಎಂದು ಕಿಡಿಕಾರಿದರು.

ಮುಸ್ಲಿಂ ಸಮುದಾಯದಲ್ಲಿ ಕರಿಯರಿಲ್ಲವೇ ಅವರನ್ನೂ ನೀವು ನಿಂದಿಸಿದಂತೆ ಆಗುವುದಿಲ್ಲವೇ ಮತ್ತು ನಮ್ಮ ಭಾರತ ದೇಶದಲ್ಲಿ ಯಾವ ಜನಾಂಗದಲ್ಲಿ ಕಪ್ಪು ಬಣ್ಣದ ಚರ್ಮವುಳ್ಳ ಜನರಿಲ್ಲ ಹೇಳಿ ಈ ರೀತಿಯ ಹೇಳಿಕೆಗಳಿಂದ ಒಂದು ಸಮುದಾಯದಿಂದ ಮತ್ತೊಂದು ಸಮುದಾಯದ ಮೇಲೆ ಜನಾಂಗೀಯ ದ್ವೇಷವನ್ನು ಉಂಟುಮಾಡುವ ಹಾಗೆ ಆಗುವುದಿಲ್ಲವೇ ಎಂದು ಕಾರವಾಗಿ ಪ್ರಶ್ನಿಸಿದರು.

ಜಮೀರ್ ಹೇಳಿಕೆ ಅತ್ಯಂತ ಅಪಾಯಕಾರಿ ಬೆಳವಣಿಗೆ ಇದು ಮನುಷ್ಯ ಕುಲವನ್ನೇ ಕೀಳಾಗಿ ಕಾಣುವುದು ಇದು ಸಂವಿಧಾನ ಬಾಹಿರ ಮತ್ತು ಇಲ್ಲಿ ಜಾತಿ ನಿಂದನೆ ಯಾಗಿದ್ದು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಗಂಗಾಧರ್ ಆಗ್ರಹಿಸಿದರು.

ಮೈಸೂರು ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ ಸಚಿವ ಜಮೀರ್ ಅಹಮದ್ ಖಾನ್ ಅತ್ಯಂತ ಲಘವಾಗಿ ಮತ್ತು ಪ್ರಚೋದನಕಾರಿಯಾಗಿ ಮಾತನಾಡುವುದು, ಸಭೆಗಳಲ್ಲಿ ಇದು ಮೊದಲೇನಲ್ಲ ಇದು ಪುನಾರವರ್ತನೆ ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೇಜೇಶ್ ಲೋಕೇಶ್ ಗೌಡ ಮಾತನಾಡಿ ಒಕ್ಕಲಿಗರು ಜಗತ್ತಿಗೆ ಅನ್ನ ನೀಡುವವರು. ಎಚ್ ಡಿ ದೇವೇಗೌಡರು ನಮ್ಮ ಸಮುದಾಯದ ಅಸ್ಮಿತೆ, ಹಿರಿಯ ಮುತ್ಸದಿಗಳು, ಅವರ ಗರಡಿಯಲ್ಲೇ ಪಳಗಿ, ಅವರ ಮನೆ ಬಾಗಿಲನ್ನು ಕಾದು ಈಗ ಶಾಸಕನಾಗಿ, ಸಚಿವನಾಗಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ರವಿ, ನಗರ ಪಾಲಿಕೆ ಸದಸ್ಯೆ ಪ್ರೇಮ ಶಂಕರೇಗೌಡ ಹಾಗೂ ಪ್ರತಾಪ್ ಉಪಸ್ಥಿತರಿದ್ದರು.

Advertisement
Tags :
Advertisement