HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಸದ್ಭಾವನ ಯುವಕರ ಸಂಘದಿಂದ ವಾಜಪೇಯಿ ಜನ್ಮದಿನ ಅರ್ಥಪೂರ್ಣ ಆಚರಣೆ

ಮೈಸೂರಿನ ಸದ್ಭಾವನ ಯುವಕರ ಸಂಘದ ಸದಸ್ಯರು ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
02:17 PM Dec 25, 2024 IST | ಅಮೃತ ಮೈಸೂರು
Advertisement

ಮೈಸೂರು: ಮೈಸೂರಿನ ಸದ್ಭಾವನ ಯುವಕರ ಸಂಘದ ಸದಸ್ಯರು ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

Advertisement

ಮೈಸೂರಿನ ದೇವರಾಜ ಮಾರುಕಟ್ಟೆ ಬಳಿ ಅಟಲ್ ಬಿಹಾರ್ ವಾಜಪೇಯಿ ಅವರ ಜನ್ಮದಿನ ಸುಶಾಸನ ದಿವಾಸ್ ಅಂಗವಾಗಿ ಆಟೋ ಚಾಲಕರಿಗೆ ಹೊದಿಕೆ ವಿತರಣೆ ಮಾಡಿ ಮಾನವೀಯತೆ ಮೆರೆಯಲಾಯಿತು.

ಇದೇ‌ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಶಿಕ್ಷಣ ಕ್ಷೇತ್ರದಿಂದ ಎಂ. ಡಿ ಗೋಪಿನಾಥ್, ಉದ್ಯಮ ಕ್ಷೇತ್ರದಿಂದ ನಾರಾಯಣಗೌಡ ಅವರುಗಳನ್ನು ಸನ್ಮಾನಿಸಲಾಯಿತು.

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಸತೀಶ್, ಸೋಮಶೇಖರ್ ರಾಜ್, ಟೆನಿಸ್ ಗೋಪಿ, ಶ್ರೀನಿವಾಸ್, ಜೆಡಿಎಸ್ ಮುಖಂಡರಾದ ಸಂಜಯ್ ಗೌಡ, ಮತ್ತು ಸದ್ಭಾವನ ಯುವಕರ ಸಂಘದ ಸದಸ್ಯರಾದ ರಾ ಪರಮೇಶ್ ಗೌಡ, ಸುರೇಂದ್ರ, ನಾಗೇಶ್ ಯಾದವ್, ಕಿರಣ್, ಬೆಳಕು ಮಂಜು, ಪ್ರಮೋದ್ ಗೌಡ, ವಿನೋದ್, ಶ್ರವಣ್, ಶ್ರೀನಿವಾಸ್ ಮತ್ತು ಶ್ರೀರಾಂಪೇಟೆ ವರ್ತಕರು ಹಾಗೂ ಆಟೋ ಚಾಲಕರು ಮತ್ತಿತರರು ಭಾಗವಹಿಸಿದ್ದರು.

Advertisement
Tags :
Atal Buhari VajpayeeBirthdayMysore
Advertisement
Next Article