HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಮಳೆಗೆ ರಸ್ತೆ ಕುಸಿದು 15 ಅಡಿ‌ ಕಂದಕ ನಿರ್ಮಾಣ

ಸತತ ಮಳೆಗೆ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ಸಮೀಪ ರಸ್ತೆ ಕುಸಿದುಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡಿದೆ.
05:49 PM Oct 25, 2024 IST | ಅಮೃತ ಮೈಸೂರು
Advertisement

ಮೈಸೂರು:‌ ಸತತ ಮಳೆಗೆ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ಸಮೀಪ ರಸ್ತೆ ಕುಸಿದುಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡಿದೆ.

Advertisement

ಮಣ್ಣು ಕುಸಿದ ಪರಿಣಾಮ ರಸ್ತೆಯಲ್ಲಿ ಸುಮಾರು 15 ಅಡಿಯಷ್ಟು ಆಳದ ಕಂದಕ ನಿರ್ಮಾಣವಾಗಿದ್ದು ರಸ್ತೆ ಯಲ್ಲಿ ಸಂಚರಿಸುವವರು ಯಾಮಾರಿದರೆ ಅನಾಹುತ ತಪ್ಪಿದ್ದಲ್ಲ.

ಸ್ಥಳಕ್ಕೆ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ರಸ್ತೆಯಲ್ಲಿ ಸಂಚರಿಸುವವರು ಹುಷಾರಾಗಿ ಚಲಿಸಬೇಕಿದೆ.ಕಂದಕದ ಸುತ್ತ ಬೋರ್ಡ್ ಹಾಕಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Tags :
MetagalliMysoreRoad
Advertisement
Next Article