HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಪಾರಂಪರಿಕ ಜಾವಾ ಮೋಟಾರ್ ಬೈಕ್‌ ಸವಾರಿ‌

ಮೈಸೂರು ದಸರಾ ಪ್ರಯುಕ್ತ ಪಾರಂಪರಿಕ ಜಾವಾ ಮೋಟಾರ್ ಬೈಕ್‌ ಸವಾರಿ‌ ಹಮ್ಮಿಕೊಳ್ಳಲಾಗಿತ್ತು
05:37 PM Oct 04, 2024 IST | ಅಮೃತ ಮೈಸೂರು
Advertisement

ಮೈಸೂರು: ಮೈಸೂರು ದಸರಾ ಪ್ರಯುಕ್ತ
ಪಾರಂಪರಿಕ ಜಾವಾ ಮೋಟಾರ್ ಬೈಕ್‌ ಸವಾರಿ‌ ಹಮ್ಮಿಕೊಳ್ಳಲಾಗಿತ್ತು.ಜನ ರಸ್ತೆ‌ಬದಿ ನಿಂತು ನೋಡಿ ಆನಂದಿಸಿದರು.

Advertisement

ರಂಗಚಾರ್ಲು ಪುರಭವನ ಆವರಣದಲ್ಲಿ‌ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಇದನ್ನು ಆಯೋಜಿಸಿತ್ತು.

ಪಾರಂಪರಿಕ ಜಾವಾ ಮೋಟಾರ್ ಬೈಕ್‌ ಸವಾರಿಗೆ ಪುರತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು‌ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮೈಸೂರು ದಸರಾ ವಿಶ್ವಕ್ಕೆ ಒಂದು ಪರಂಪರೆಯನ್ನು ತೋರಿಸುತ್ತದೆ,ಮೈಸೂರಿನಲ್ಲಿ ಪಾರಂಪರಿಕ, ಸಾಂಸ್ಕೃತಿಕವಾಗಿ ಸಾಕಷ್ಟು ವಿಚಾರಗಳಿವೆ ಎಂದು ಹೇಳಿದರು.

ಇಂದಿನ ಮಕ್ಕಳಿಗೆ ಪಾರಂಪರಿಕ ವಿಚಾರಗಳನ್ನು ಪರಿಚಯ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ವಸ್ತು ಪ್ರದರ್ಶನದಲ್ಲಿ ಮೈಸೂರು ಜಿಲ್ಲೆಯ ವಿಶೇಷ ಪಾರಂಪರಿಕ ಸ್ಮಾರಕಗಳು ಕಟ್ಟಡಗಳನ್ನು ಅಲ್ಲಿ ವೀಕ್ಷಿಸಬಹುದು ಜತೆಗೆ ದಿನಸಿ, ಮೈಸೂರ್ ಸ್ಯಾಂಡಲ್ ಸೋಪ್, ಮೈಸೂರ್ ಸಿಲ್ಕ್, ಚನ್ನಪಟ್ಟಣ ಗೊಂಬೆಗಳನ್ನೂ ಇಡಲಾಗಿದ್ದು. ನಮ್ಮ ಇಲಾಖೆಯ ಪರವಾಗಿ ಸುಮಾರು 13 ಮಳಿಗೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ಪಾದೇಶಿಕ ಆಯುಕ್ತ ರಮೇಶ್ ಡಿ.ಎಸ್ ಅವರು ಮಾತನಾಡಿ ಪರಂಪರೆ ಎಂದರೆ ನಾವು ಬೆಳೆದು ಬಂದ ದಾರಿ, ವಿಶೇಷವಾಗಿ ಪಾರಂಪರಿಕ ಕಟ್ಟಡಗಳು ಸ್ಮಾರಕಗಳಿಗೆ ಸಂಬಂಧಿಸಿದಂತೆ ಇವು ಯಾವ ಕಾರಣಕ್ಕಾಗಿ ಯಾವ ಕಾಲದಲ್ಲಿ ಸ್ಥಾಪಿಸಲಾಯಿತು ಎಂದು‌ ತಿಳಿದುಕೊಳ್ಳಬೇಕು‌ ಎಂದು ಸಲಹೆ ನೀಡಿದರು.

ಜಾವಾ ಮೋಟಾರ್ ಬೈಕ್ ಸವಾರಿಯು ಪುರ ಭವನದಿಂದ ಹೊರಟು ದೊಡ್ಡ ಗಡಿಯಾರ ಚಾಮರಾಜ ಒಡೆಯರ್ ವೃತ್ತ ಕೆ ಆರ್ ಸರ್ಕಲ್ ಬನ್ಮಯ್ಯ ಕಾಲೇಜು ಕಾಡಾ ಕಛೇರಿ ಹಾರ್ಡಿಂಜ್ ಸರ್ಕಲ್ ಎಸ್ ಐ ಆರ್ ಡಿ ಲಲಿತಮಹಲ್ ಟೇರಿಷಿಯನ್‌ ಕಾಲೇಜು ಪಿ ಟಿ ಸರ್ಕಲ್ ವಸಂತ ಮಹಲ್ ಮತ್ತು ಪುರಾತತ್ವ ಇಲಾಖೆಯನ್ನು ತಲುಪಿತು.

ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ನಿರ್ದೇಶಕರಾದ ಅಮಿತ್ ಪಾಂಡೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಯನದ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಸರ್ವಪಿಳ್ಳೆ ಅಯ್ಯಂಗರ್, ಮತ್ತು ‌ಹಿರಿಯರಾದ ಎಸ್‌.ಎಸ್ ರಂಗರಾಜು ಮತ್ತಿತರರು ಹಾಜರಿದ್ದರು.

Advertisement
Tags :
MysoreTownhall
Advertisement
Next Article