For the best experience, open
https://m.navayuganews.com
on your mobile browser.
Advertisement

ಮೈಸೂರು: ಕಳೆದ ಹಲವು ದಶಕಗಳಿಂದ ರಾಜ್ಯ ಹಾಗೂ ಕೇಂದ್ರವನ್ನಾಳುತ್ತಿರುವ ಎಲ್ಲ ಪಕ್ಷಗಳ ಸರ್ಕಾರಗಳು ನಿರಂತರವಾಗಿ ದೇಶದ ರೈತರನ್ನು ಶೋಷಿಸುತ್ತಲೇ ಬಂದಿವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.

Advertisement

ಮುಂದಿನ ದಿನಗಳಲ್ಲಾದರೂ ರೈತರುಗಳು ಸಂಘಟನಾತ್ಮಕವಾಗಿ ಹೋರಾಡಬೇಕೆಂದು ಅವರು ಕರೆ ನೀಡಿದರು.

ಇಂದು ವಿಶ್ವ ರೈತರ ದಿನದ ಅಂಗವಾಗಿ ಮೈಸೂರು ನಗರದ ಮುಕ್ತ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ, ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಚಂದ್ರು ಮಾತನಾಡಿದರು.

ರೈತರ ಬೆಂಬಲ ಬೆಲೆ ಹಾಗೂ ಮೂರು ಕರಾಳ ಶಾಸನಗಳನ್ನು ರದ್ದುಗೊಳಿಸಲು ಒಂದು ವರ್ಷಗಳ ಕಾಲ ನಿರಂತರ ಹೋರಾಟ ಮಾಡಿ 900 ರೈತರು ತಮ್ಮ ಜೀವವನ್ನೇ ಅರ್ಪಿಸಿದ್ದರು ಸಹ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದುವರೆಗೂ ಇವುಗಳನ್ನು ರದ್ದುಗೊಳಿಸಿಲ್ಲ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಬಹುಮತವಿಲ್ಲದಿದ್ದರೂ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ದೇಶದ ರೈತರನ್ನು ಅಂಧಕಾರದಲ್ಲಿ ದೂಡಿದೆ. ರಾಜ್ಯ ಸರ್ಕಾರ ಸಹ ಇದೇ ಶಾಸನಗಳನ್ನು ಮುಂದುವರಿಸಿಕೊಂಡು ಬಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಎಲ್ಲ ಪಕ್ಷಗಳ ರಾಜಕಾರಣಿಗಳು ಕೇವಲ ವೋಟ್ ಬ್ಯಾಂಕ್ ಗೋಸ್ಕರ ರೈತರುಗಳನ್ನು ನಿರಂತರ ಶೋಷಿಸುತಿರುವುದರ ವಿರುದ್ಧ ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕು, ರೈತರೇ ಅಧಿಕಾರಕ್ಕೆ ಬಂದು ರೈತರ ಸರ್ಕಾರ ನಿರ್ಮಾಣ ಮಾಡಿದ ದಿವಸ ಈ ಕೆಟ್ಟ ಸರ್ಕಾರಗಳಿಂದ ದೇಶದ ರೈತರಿಗೆ ಮುಕ್ತಿ ಸಿಗಲು ಸಾಧ್ಯ ಎಂದು ಚಂದ್ರು ನುಡಿದರು.

ಸಭೆಯಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಅನೇಕ ರೈತ ನಾಯಕರುಗಳು ಹಾಗೂ ಸಾವಿರಾರು ರೈತರುಗಳು ಭಾಗವಹಿಸಿದ್ದರು.

Advertisement
Tags :
Advertisement