HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ನಾಳೆ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ವಿಶ್ವ ವಿಖ್ಯಾತ ದಸರಾ ಮಹೀತ್ಸವಕ್ಕೆ ನಾಳೆ ವಿದ್ಯುಕ್ತ ಚಾಲನೆ ದೊರೆಯಲಿದ್ದು‌ ಅಂತಿಮ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಲಕ್ಮೀಕಾಂತರೆಡ್ಡಿ ಪರಿಶೀಲಿಸಿದರು.
02:19 PM Oct 02, 2024 IST | ಅಮೃತ ಮೈಸೂರು
Advertisement

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೀತ್ಸವಕ್ಕೆ ನಾಳೆ ವಿದ್ಯುಕ್ತ ಚಾಲನೆ ದೊರೆಯಲಿದ್ದು‌ ಅಂತಿಮ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಲಕ್ಮೀಕಾಂತರೆಡ್ಡಿ ಪರಿಶೀಲಿಸಿದರು.

Advertisement

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದ್ದು,ಅದಕ್ಕಾಗಿ ದೇವಿಯ ಉತ್ಸವ ಮೂರ್ತಿಗೆ ಹಿರಿಯ ಅರ್ಚಕರಾದ‌
ಶ್ರೀ ಶಶಿಶೇಖರ ದೀಕ್ಷಿತ್ ಅವರು ಅಲಂಕಾರ ಮಾಡಿದರು.

ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ನಾಳೆ ಬೆಳಗ್ಗೆ 9.15 ರಿಂದ 9.45 ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವ ಪ್ರಾರಂಭವಾಗಲಿದೆ‌

ನಾಡೋಜ ಸಾಹಿತಿ ಹಂಪ ನಾಗರಾಜಯ್ಯ ಅವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ರಾಜಕಾರಣಿಗಳು ಉಪಸ್ಥಿತರಿರುವರು‌

ಅಂದೆರ ಸಂಜೆ 6 ಕ್ಕೆ ಮೈಸೂರು ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡುವರು

ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ದಸರಾ ಮಹೋತ್ಸವದ ಪ್ರಧಾನ ಉದ್ಘಾಟನಾ ಸಮಾರಂಭದ ನಂತರ ಚಲನಚಿತ್ರೋತ್ಸವ, ಆಹಾರಮೇಳ, ವಸ್ತು ಪ್ರದರ್ಶನ, ಕುಸ್ತಿ ಪಂದ್ಯಾವಳಿ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೂ ಚಾಲನೆ ದೊರೆಯಲಿದೆ.

ಅಕ್ಟೋಬರ್ 12ರಂದು ವಿಜಯದಶಮಿ ಕಾರ್ಯಕ್ರಮ ನಡೆಯಲಿದ್ದು ಆ ದಿನ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ನಡೆಯಲಿದೆ,ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಇರಲಿದೆ.

Advertisement
Tags :
Chamundi HillMysore
Advertisement
Next Article