HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ, ನಿಮ್ಮ ಕೈನಲ್ಲಿ ಏನು ಮಾಡಕ್ಕಾಗಲ್ಲಾ: ಡಿಕೆಶಿ ಟಾಂಗ್

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು
07:00 PM Aug 09, 2024 IST | ಅಮೃತ ಮೈಸೂರು
Advertisement

ಮೈಸೂರು,ಆ.9: ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ. ನನ್ನ ಜೊತೆ 136 ಶಾಸಕರಿದ್ದಾರೆ. ನಿಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಬಿಜೆಪಿ,ಜೆಡಿಎಸ್ ಗೆ ಟಾಂಗ್ ನೀಡಿದರು.

Advertisement

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಏ ಕುಮಾರಸ್ವಾಮಿ, ಏ ಅಶೋಕಾ, ಏ ವಿಜಯೇಂದ್ರ ನಿಮಗೆ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ ಎಂದು ಕಾರವಾಗಿ ಪ್ರಶ್ನಿಸಿದರು.

ನಮ್ಮ ಸರ್ಕಾರವನ್ನು10 ತಿಂಗಳಲ್ಲಿ ತೆಗೆಯುತ್ತೇವೆ ಎಂದು ಹುನ್ನಾರ ನಡೆಸಿದ್ದಾರೆ,ಆದರೆ ನಮ್ಮ ಯೋಜನೆಗಳ ರಕ್ಷಣೆಗಾಗಿ ಈ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಜನರು ಅಧಿಕಾರಕ್ಕೆ ಬಂದ ಹಾಗೆ. ನಮ್ಮ ಜನಾಂದೋಲನ ರಾಜ್ಯದ, ಸಂವಿಧಾನದ ರಕ್ಷಣೆಗಾಗಿ ತಿಳಿದುಕೊಳ್ಳಿ ಎಂದರು ಬಂಡೆ.

ಕುಮಾರಸ್ವಾಮಿ ನಿನ್ನ ಅಧ್ಯಕ್ಷತೆಯಲ್ಲಿ ಜೆಡಿಎಸ್‌ 19 ಸೀಟ್ ಗೆದ್ದಿದೆ. ಈ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ 136 ಸ್ಥಾನ ಗೆದ್ದಿದೆ. ಬ್ರಿಟಿಷರಿಂದ ಕಾಂಗ್ರೆಸ್ ತೆಗೆಯಲು ಆಗಲಿಲ್ಲ. ನೀನು ಎರಡು ಜನ್ಮ ಎತ್ತಿದರೂ ನಮ್ಮನ್ನ ತೆಗೆಯಲು ಆಗೋದಿಲ್ಲ ಎಂದು ಡಿ.ಕೆಶಿ ಏಕವಚನದಲ್ಲೇ ಎಚ್ಚರಿಕೆ ಕೊಟ್ಟರು.

ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಿ ಅವರ ಅಣ್ಣ ಅರಿಶಿನ ಕುಂಕುಮಕ್ಕೆ ಜಮೀನು ಕೊಟ್ಟಿದ್ದಾರೆ. ಸಾಮಾನ್ಯ ಜನರು ಅಕ್ಕ-ತಂಗಿಯರಿಗೆ ಜಮೀನು ಕೊಡುತ್ತಾರೆ. ಪಾರ್ವತಿ ಅವರಿಗೆ ಅದೇ ರೀತಿ ಕೊಟ್ಟಿದ್ದಾರೆ. ಅದು ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲ. ಡಿನೋಟಿಫೀಕೇಶನ್ ಆದ ಜಮೀನನ್ನು ಕೊಡಿ ಎಂದು ಪಾರ್ವತಿ ಅವರು ಕೇಳಿದ್ದಾರೆ. ಬಳಿಕ ಆ ಜಮೀನಿನ ಬದಲಿಗೆ 14 ಸೈಟ್ ಕೊಟ್ಟಿದ್ದಾರೆ. ನನ್ನಂತವನು ಇದ್ದರೆ ಆ ಹೋರಾಟವೇ ಬೇರೆ ಇತ್ತು. ಇದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ನನ್ನ ಹೆಂಡತಿಗೆ ಜಮೀನು ಕೊಡಿ ಅಂತಾ ಪತ್ರ ಬರೆದಿದ್ದರಾ ಬಸವರಾಜ ಬೊಮ್ಮಯಿ ಕಾಲದಲ್ಲೇ ಸೈಟ್ ಕೊಡಲಾಗಿದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣಗಳು ಇವೆ ಮೊದ್ಲು ಅದನ್ನ ನೋಡ್ಕೊಳಿ, ನಿಮ್ಮ ಕಾಲದಲ್ಲಿ 28 ಹಗರಣಗಳು ಇವೆ ಮರೀಬೇಡಿ ಎಂದು ಡಿ.ಕೆ.ಶಿವಕುಮಾರ್ ಗುಡುಗಿದರು.

Advertisement
Tags :
BJPCongressMaharaja CollegeMysoreTong
Advertisement
Next Article