HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಕೊಟ್ಟಿಗೆ ಬೀಗ ಮುರಿದು ಕುರಿ,ಮೇಕೆ ಕದ್ದ ಕಳ್ಳರು

05:27 PM Dec 24, 2024 IST | ಅಮೃತ ಮೈಸೂರು
Advertisement

ಮಂಡ್ಯ: ಮನೆಯ ಮುಂದೆ ಇರುವ ಜಾನುವಾರುಗಳ ಕೊಟ್ಟಿಗೆಯ ಬೀಗ ಮುರಿದು 2 ಲಕ್ಷಕ್ಕೂ ಅಧಿಕ ಬೆಲೆಯ 9 ಟಗರು, ಮೇಕೆಗಳನ್ನು ಯಾರೊ ಕಳವು ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ‌ ನಡೆದಿದೆ.

ತಾಲೂಕಿನ ಬೋರೆ ಮೇಗಳ ಕೊಪ್ಪಲು ಗ್ರಾಮದ ನರಸಿಂಹೇಗೌಡರ ಮಗ ಧರ್ಮ ಎಂಬುವರ ಮನೆಯಲ್ಲಿ ನಿನ್ನೆ ಮಧ್ಯರಾತ್ರಿ ಕಳ್ಳತನ ನಡೆದಿದೆ.

Advertisement

ಮಧ್ಯರಾತ್ರಿ ವಾಹನದಲ್ಲಿ ಬಂದಿದ್ದ ಕಳ್ಳರು ಮನೆಯವರು ಹೊರಗೆ ಬಾರದಂತೆ ಬಾಗಿಲಿನ ಚಿಲಕಕ್ಕೆ ಕಡ್ಡಿ ಸಿಲುಕಿಸಿ ಕೊಟ್ಟಿಗೆ ಬೀಗ ಮೀಟಿ ಎರಡು ಸಣ್ಣ ಮರಿಗಳನ್ನು ಅಲ್ಲೇ ಬಿಟ್ಟು ಉಳಿದ 9 ಟಗರು,ಮೇಕೆ,ಹೋತಗಳನ್ನು ಕಳವು ಮಾಡಿದ್ದಾರೆ.

ರಾತ್ರಿ 1.30ಕ್ಕೆ ಮನೆಯಿಂದ ಹೊರಬರಲು ಪ್ರಯತ್ನ ನಡೆಸಿದಾಗ ಹೊರಗಿನಿಂದ ಚಿಲಕ ಹಾಕಿರುವುದು ಮನೆಯ ಮಾಲೀಕರಿಗೆ ಗೊತ್ತಾಗಿದೆ.

ತಕ್ಷಣ ಅಕ್ಕ,ಪಕ್ಕದವರಿಗೆ ವಿಷಯ ತಿಳಿಸಿ ವಾಹನ ಹಿಡಿಯಲು ಯತ್ನಿಸಿದರೂ ಫಲವಾಗಿಲ್ಲ,ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Advertisement
Tags :
MandyaPandavapurStole Sheeps
Advertisement
Next Article