HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಮಳೆಯಲ್ಲೂ ಯುವ ಸಂಭ್ರಮದಲ್ಲಿ ಪಾಲ್ಗೊಂಡ ಯುವಜನತೆ

ದಸರಾ ಪ್ರಯುಕ್ತ ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ‌ ಆಯೋಜಿಸಿರುವ ಯುವಸಂಭ್ರಮದ ನೃತ್ಯ ಪ್ರದರ್ಶನ
02:07 PM Sep 26, 2024 IST | ಅಮೃತ ಮೈಸೂರು
Advertisement

ಮೈಸೂರು: ದಸರಾ ಪ್ರಯುಕ್ತ ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ‌ ಆಯೋಜಿಸಿರುವ ಯುವಸಂಭ್ರಮದಲ್ಲಿ ಜಿಟಿ,ಜಿಟಿ ಮಳೆಯಲ್ಲೂ ಯುವಜನತೆ ಮಿಂದೆದ್ದಿತು

Advertisement

ಎರಡನೆ‌ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡದ ಕಮೋಡಳ್ಳಿ‌ ಕಲಾ ತಂಡದವರ ಮಲ್ಲಗಂಬ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಮಂಡ್ಯದ ಕಿರುಗಾವಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ‌ ತಂಡದವರು ಮಹಿಳೆಯರ ಶಕ್ತಿ, ಆತ್ಮವಿಶ್ವಾಸ ಮತ್ತು ಸಾಮರ್ಥ್ಯದ ಕುರಿತು ನೃತ್ಯವನ್ನು ಪ್ರದರ್ಶಿಸಿದರು, ಮೈಸೂರಿನ ಟೇರಿಷಿಯನ್ ಪದವಿ ಪೂರ್ವ ಕಾಲೇಜಿನ ತಂಡದವರ ರಾಷ್ಟ್ರೀಯ ಭಾವೈಕ್ಯತೆಯ ಕುರಿತು ನೃತ್ಯ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ 51 ನೃತ್ಯ ಪ್ರದರ್ಶನಗಳು ಎಲ್ಲರನ್ನು ಆಕರ್ಶಿಸಿತು. ದಸರ ಅರ್ಜುನ ಆನೆ, ಜಾನಪದ ವೈವಿಧ್ಯತೆ ಪರಂಪರೆ, ಕನ್ನಡ ಸಿನಿಮಾಧಾರಿತ, ಕಾನೂನು ಮತ್ತು ಸುವ್ಯವಸ್ಥೆ, ಹುಲಿವೇಷ ಮತ್ತು ಯಕ್ಷಗಾನ, ಭಾರತೀಯ ಯೋಧರ ಪಾತ್ರ, ನವಶಕ್ತಿ, ಅರ್ಜುನ ಆನೆ, ಪರಿಸರ ಸಂರಕ್ಷಣೆ, ಫ್ರೀಡಂ ಫೈಟರ್, ಸಾಂಸ್ಕೃತಿಕ ಪರಂಪರೆ, ಆಧುನಿಕ ‌ನೃತ್ಯ ಪ್ರಕಾರಗಳು, ಕೊಡಗಿನ ಸೈನಿಕ, ಭಾರತ ಸಂವಿಧಾನ,‌ವಿಜಯ ನಗರ ಸಾಮ್ರಾಜ್ಯ, ಕನ್ನಡ‌ ಸಿನಿಮಾಧಾರಿತ, ಮತ್ತು ವೈನಾಡು ದುರಂತ ಮುಂತಾದ ವಿಷಯಗಳ ಕುರಿತ ನೃತ್ಯ ಪ್ರದರ್ಶನಗೊಂಡವು

ಎಲ್ಲಾ‌ ತಂಡಗಳಿಗೂ ಮೈಸೂರು ದಸರ ಉಪಸಮಿತಿ‌ ವತಿಯಿಂದ ಪ್ರಶಸ್ತಿ ಮತ್ತು ಚೆಕ್ ವಿತರಿಸಲಾಯಿತು.

Advertisement
Tags :
Manasa GangothriMysore
Advertisement
Next Article