ಎಂಇಎಸ್ ನಾಯಕರ ಗಡಿಪಾರು ಮಾಡಲು ತೇಜಸ್ವಿ ಆಗ್ರಹ
06:53 PM Nov 30, 2024 IST
|
ಅಮೃತ ಮೈಸೂರು
Advertisement
ಮೈಸೂರು: ಎಂಇಎಸ್ ನಾಯಕರನ್ನು ನಾಡದ್ರೋಹಿ ಗಳೆಂದು ಪರಿಗಣಿಸಿ ಗಡಿಪಾರು ಮಾಡಬೇಕೆಂದು ಕನ್ನಡ ಚಳವಳಿ ಹೋರಾಟಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.
Advertisement
ಬೆಳಗಾವಿ ಗಡಿಭಾಗದಲ್ಲಿ ಭಾಷಾ ವೈಷಮ್ಯ ವಿಷಬೀಜ ಬಿತ್ತಿ ಮುಗ್ಧ ಕನ್ನಡಿಗರು ಮತ್ತು ಮರಾಠಿಗರನ್ನು ಪ್ರಚೋದಿಸಿ, ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಎಂಇಎಸ್ ನಾಯಕರನ್ನು ನಾಡದ್ರೋಹಿ ಗಳೆಂದು ಪರಿಗಣಿಸಿ ಗಡಿಪಾರು ಮಾಡಬೇಕು
ಮತ್ತು ಎಂಇಎಸ್ ಸಂಘಟನೆಯನ್ನು ನಿಷೇಧಿಸಲು ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯೋತ್ಸವ ದಿನ ಕರಾಳ ದಿನಾಚರಣೆ ಮಾಡಿ ಅಧಿವೇಶನ ಸಂದರ್ಭದಲ್ಲಿ ಮರಾಠಿ ಮೇಳಾವ್ ಮಾಡಿ ಕನ್ನಡಿಗರು ಸಂಭ್ರಮ ಪಡುವ ಸಂದರ್ಭದಲ್ಲಿ ಪದೇ ಪದೇ ಶಾಂತಿ ಭಂಗ ಮಾಡುತ್ತಿರುವ ಎಂಇಎಸ್ ನಾಯಕರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಗಡಿಪಾರು ಮಾಡಿ ಕನ್ನಡದ ಹಿತವನ್ನು ಕಾಯಬೇಕು ಎಂದು ತೇಜಸ್ವಿ ಹೇಳಿದ್ದಾರೆ.
Advertisement
Next Article