ಸಿಂಹ ಘರ್ಜನೆ ಹಾಡು ಬಿಡುಗಡೆಗೊಳಿಸಿದ ಯದುವೀರ್ ಒಡೆಯರ್
ವಿಷ್ಣುವರ್ಧನ್ ಅವರ 74ನೇ ಹುಟ್ಟು ಹಬ್ಬದ ಪ್ರಯುಕ್ತ ಪಾತಿ ಫಿಲಂಸ್ ವತಿಯಿಂದ ಎಂದಿಗೂ ನಿಲ್ಲದು ಸಿಂಹ ಘರ್ಜನೆ ಹಾಡನ್ನು ಹೊರತಂದಿದ್ದು,ಸಂಸದ ಯದುವೀರ್ ಒಡೆಯರ್ ಬಿಡುಗಡೆಗೊಳಿಸಿದರು.
06:42 PM Sep 23, 2024 IST
|
ಅಮೃತ ಮೈಸೂರು
Advertisement
ಮೈಸೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 74ನೇ ಹುಟ್ಟು ಹಬ್ಬದ ಪ್ರಯುಕ್ತ ಪಾತಿ ಫಿಲಂಸ್ ವತಿಯಿಂದ ಎಂದಿಗೂ ನಿಲ್ಲದು ಸಿಂಹ ಘರ್ಜನೆ ಹಾಡನ್ನು ಹೊರತಂದಿದ್ದು,ಸಂಸದ ಯದುವೀರ್ ಒಡೆಯರ್ ಬಿಡುಗಡೆಗೊಳಿಸಿದರು.
Advertisement
ಈ ವೇಳೆ ಯದುವೀರ್ ಮಾತನಾಡಿ, ವಿಷ್ಣುವರ್ಧನ್ ರವರು ನಮ್ಮ ಮೈಸೂರಿನವರು ಅವರ ಚಿತ್ರಗಳೆಲ್ಲವೂ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದವು ಎಂದು ಸ್ಮರಿಸಿದರು.
ವಿಷ್ಣುವರ್ಧನ್ ನೆನಪಿನಲ್ಲಿ ಯುವಕಲಾವಿದರ ಪ್ರತಿಭೆಗೆ ಅವಕಾಶ ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವ ಪಾತಿ ಫಿಲಂಸ್ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾತಿ ಫಿಲಂಸ್ ಎಂ.ಡಿ ಪಾರ್ಥಸಾರಥಿ, ನಿರ್ದೇಶಕ ಎಸ್.ಜೆ ಸಂಜಯ್, ಗಾಯಕ ವೈಶಾಖ ಶಶಿಧರ್, ಮಧಾನ್, ಅಜಯ್ ಶಾಸ್ತ್ರೀ, ಯೋಗ ನರಸಿಂಹ ಕೆ ಆರ್ (ಮುರಳಿ),ಟಿ.ಎಸ್ ಅರುಣ್,ಸುಚೇಂದ್ರ, ಚಕ್ರಪಾಣಿ, ಸಂತೋಷ್, ಮಹೇಂದ್ರ ಹಾಗೂ ವಿಷ್ಣು ಅಭಿಮಾನಿಗಳು ಉಪಸ್ಥಿತರಿದ್ದರು.
Advertisement
Next Article