HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಸಿದ್ದರಾಮಯ್ಯ ಜನ್ಮದಿನ: ವಯನಾಡಿನ ಸಂತ್ರಸ್ತರಿಗೆ ದಿನಬಳಕೆ ವಸ್ತು ರವಾನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮ ದಿನಾಚರಣೆಯನ್ನು ವಯನಾಡಿನ ಸಂತ್ರಸ್ತರಿಗೆ ದಿನಬಳಕೆ ವಸ್ತುಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
07:57 PM Aug 03, 2024 IST | ಅಮೃತ ಮೈಸೂರು
Advertisement

ಮೈಸೂರು,ಆ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮ ದಿನಾಚರಣೆಯನ್ನು ವಯನಾಡಿನ ಸಂತ್ರಸ್ತರಿಗೆ ದಿನಬಳಕೆ ವಸ್ತುಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

Advertisement

ಎನ್ ಆರ್ ಮೊಹಲ್ಲಾ,ಶಿವಾಜಿ ರಸ್ತೆಯ ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಲೀಕರಾದ ಗಂಧನಳ್ಳಿ ವೆಂಕಟೇಶ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ನವರ ಜನ್ಮ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸಲು ನಮ್ಮ ನಡೆ ಕೇರಳದ ವಯನಾಡಿನ ಸಂತ್ರಸ್ತರ ಕಡೆ ಎಂಬ ಘೋಷವಾಕ್ಯದೊಂದಿಗೆ 1 ಲಕ್ಷ ರೂ ಮೌಲ್ಯದ ದಿನನಿತ್ಯ ವಸ್ತುಗಳನ್ನು ಅವರ ಆಸ್ಪತ್ರೆಯ ಸಿಬ್ಬಂದಿಗಳು ಅಂಬುಲೆನ್ಸ್ ಮೂಲಕ ತಲುಪಿಸಲು ಹೊರಟಿದ್ದಾರೆ.

ಈ‌ ವೇಳೆ ಗಂಧನಹಳ್ಳಿ ವೆಂಕಟೇಶ್ ರವರು ಮಾತನಾಡಿ,ಜನರಿಗೆ ಸಮಸ್ಯೆ ಮತ್ತು ಸಂಕಷ್ಟಗಳು ಎದುರಾದಾಗ ನಮ್ಮ ಆಸ್ಪತ್ರೆಯಿಂದ ಸಹಾಯ ಸಹಕಾರ ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ವಯನಾಡ್ ದುರಂತದಲ್ಲಿ ಸಂಕಷ್ಟಕ್ಕೀಡಾದವರಿಗೆ ನಮ್ಮ ಆಸ್ಪತ್ರೆ ವತಿಯಿಂದ ಒಂದು ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದರು.

ಮಳೆ, ಪ್ರವಾಹ ದುರಂತದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ, ಸರ್ಕಾರದ ಜೊತೆಯಲ್ಲಿ ಸಂಘ ಸಂಸ್ಥೆಗಳು ಸಾರ್ವಜನಿಕರು ಸಹಕಾರ ನೀಡಿದಾಗ ಸಂಕಷ್ಟಗಳಿಗೆ ಸುಲಭ ಪರಿಹಾರ ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಮನುಷ್ಯ ಕಷ್ಟದಲ್ಲಿದ್ದಾಗ ಮಾನವೀಯತೆಯಿಂದ ಸಹಾಯ ಮಾಡುವುದು ಮನುಕುಲದ ಧರ್ಮ, ಹಾಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಯಾವುದೇ ದುಂದುವೆಚ್ಛ ಮಾಡದೇ ಕೇರಳದ ವಯನಾಡು ಪ್ರಕೃತಿ ವಿಕೋಪದಿಂದಾಗಿ ತೊಂದರೆಯಲ್ಲಿರುವ ಜನರ ನೆರವಿಗಾಗಿ ದಿನಬಳಕೆ ಮತ್ತು ಅಗತ್ಯಕರ ಔಷಧಿಗಳನ್ನು ಕಳಿಸಿಕೊಡುತ್ತಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ವೈದ್ಯರಾದ ಕಮಲಮ್ಮ, ಸುಮಂತ್, ಯುವರಾಜ್, ತೇಜಸ್, ಗುರುರಾಜ್ ಮತ್ತಿತರ ಸಿಬ್ಬಂದಿ ಹಾಜರಿದ್ದರು.

Advertisement
Tags :
BirthdayMysoreSiddaramaiah's
Advertisement
Next Article