For the best experience, open
https://m.navayuganews.com
on your mobile browser.
Advertisement

ಮೈಸೂರು: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮವು ಎರಡೆರಡು ಗಿನ್ನಿಸ್ ವಿಶ್ವ ದಾಖಲೆ ಮಾಡಿದೆ.

Advertisement

ಒಂದು ಹನುಮಾನ್‌ ಚಾಲೀಸ ಪಾರಾಯಣ ಮತ್ತೊಂದು ವಿಶೇಷ ಅಂಚೆ ಚೀಟಿ ಗಾಗಿ ಗಿನ್ನಿಸ್ ದಾಖಲೆ ಮಾಡಿದೆ.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜೀಯವರ ಅಧ್ವರ್ಯದಲ್ಲಿ ಅವಧೂತ ದತ್ತ ಪೀಠದ ನಾದಮಂಟಪದಲ್ಲಿ 650ಕ್ಕೂ ಹೆಚ್ಚು ಮಂದಿ ಸತತವಾಗಿ ಅಹೋರಾತ್ರಿ 33 ಗಂಟೆ 33 ನಿಮಿಷ 33 ಸೆಕೆಂಡ್ ಹನುಮಾನ್ ಚಾಲೀಸ ಪಾರಾಯಣವನ್ನು ಮಾಡಿದುದು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

ಈ ಪ್ರಯತ್ನಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆಯು ಅವರ ಪ್ರತಿನಿಧಿ ಸ್ವಪ್ನಿಲ್ ಡಂಗರಿಕರ್ ಅವರನ್ನು ಕಳುಹಿಸಿತ್ತು,ಈ ಸತತ ಪಾರಾಯಣವನ್ನು ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆ ಮಾಡಿದ್ದಾರೆ.

ವಡೋದರದ ಸ್ವಾಮಿ ನಾರಾಯಣ ಭಜನ್ ಯಾಗ, ಪರಮ ಪೂಜ್ಯ ಸದ್ಗುರು ಶ್ರೀ ಜ್ಞಾನಿವಂದಸ್ಜಿ ಸ್ವಾಮಿ - ಕುಂಡಲಧಾಮ ಅವರು 2022ರ ಜುಲೈ 23 ರಂದು 27 ಗಂಟೆ 27 ನಿಮಿಷ 27 ಸೆಕೆಂಡ್ ಪಾರಾಯಣ ಮಾಡಿ ದಾಖಲೆ ನಿರ್ಮಿಸಿದ್ದರು.

ನಿನ್ನೆ ನಾದಮಂಟಪದಲ್ಲಿ ಸಂಪನ್ನಗೊಂಡ ಹನುಮಾನ್‌ ಚಾಲೀಸಾ ಪಾರಾಯಣ‌ ಹಿಂದಿನ ಈ ದಾಖಲೆಯನ್ನು ಮೀರಿ ನೂತನ ಗಿನ್ನಿಸ್ ದಾಖಲೆ ಬರೆಯಿತು.

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಮತ್ತೊಂದು ದಾಖಲೆಯನ್ನೂ ಇದೇ ವೇಳೆ ಬರೆದಿದೆ.

ನಾದಮಂಟಪದ ಬೆಳ್ಳಿ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆ ವತಿಯಿಂದ ಹೊರತಂದಿರುವ ಅಂಚೆ ಚೀಟಿ ಪ್ರಪಂಚದ ಅತಿ ದೊಡ್ಡ ಅಂಚೆ ಚೀಟಿ (3.12 meters - 4.2 meters)ಯಾಗಿದ್ದು ಇದೂ ಕೂಡ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

Advertisement
Tags :
Advertisement