HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಯುವ ದಸರಾದಲ್ಲಿ ಶ್ರೇಯ ಘೋಷಲ್,ವಾಸುಕಿ ಮೋಡಿ

ಮೈಸೂರಿನ ಉತ್ತನಹಳ್ಳಿ ಬಳಿ ನಡೆಯುತ್ತಿರುವ ಯುವ ದಸರದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯ ಗೋಶಲ್ ಮೋ ಡಿ ಮಾಡಿದರು
05:06 PM Oct 07, 2024 IST | ಅಮೃತ ಮೈಸೂರು
Advertisement

ಮೈಸೂರು: ಮೈಸೂರು ದಸರಾ ಪ್ರಯುಕ್ತ ಆಯೋಜಿಸಿರುವ ಯುವ ದಸರಾದಲ್ಲಿ ಖ್ಯಾತ ಹಿನ್ನೆಲೆಬಗಾಯಕಿ ಶ್ರೇಯ ಘೋಷಲ್ ಕನ್ನಡ ಖ್ಯಾತ ಗಾಯಕ ವಾಸುಕಿ ವೈಭವ್ ಜನರಿಗೆ ಮೋಡಿ ಮಾಡಿದರು

Advertisement

ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಈ ಬಾರಿ ಮೈಸೂರು ನಗರದ ಹೊರವಲಯ ಉತ್ತನಹಳ್ಳಿಯಲ್ಲಿ ಯುವ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,
ಕನ್ನಡ ಚಲಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಅವರು ಮೈಸೂರು ದಸರಾ ಕಾರ್ಯಕ್ರಮಕ್ಕೆ ಆಗಮಿಸಿರುವ ವಿವಿಧ ರಾಷ್ಟ್ರ ರಾಜ್ಯ ಜಿಲ್ಲೆಯ ಜನತೆಗೆ ದಸರಾ ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಟಿ ದೇವೇಗೌಡ ವಹಿಸಿದ್ದರು.

ಚಿತ್ರರಂಗದ ಟಗರು ಪುಟ್ಟಿ ಖ್ಯಾತಿಯ ಮಾನ್ವಿತಾ ಮತ್ತು ತಂಡ ಭೀಮಾ ಚಿತ್ರದ ಬ್ಯಾಡ್ ಬಾಯ್ಸ್, ಟಗರು ಚಿತ್ರದ ಮೆಂಟಲ್ ಹೋ ಜಾವ, ಕರಟಕ ಧಮನಕ ಚಿತ್ರದ ಹಿತ್ತಲಕ ಕರಿಬೇಡ ಮಾವ ಗೀತೆಗಳಿಗೆ ನೃತ್ ಮಾಡಿ ರಂಜಿಸಿದರು.

ಕನ್ನಡದ ಖ್ಯಾತ ಹಿನ್ನಲೆ ಗಾಯಕ ವಾಸುಕಿ ವೈಭವ್ ಅವರ ತಂಡ ಕಿರಿಕ್ ಪಾರ್ಟಿ ಚಿತ್ರದ ಕಾಗದದ ದೋಣಿಯಲ್ಲಿ ಗೀತೆ ಹಾಡಿದರು.ನಂತರ ಕಾಣದಂತೆ ಮಯವಾದನ್ನು ನಮ್ಮ ಶಿವ ಕೈಲಾಸ ಸೇರಿಕೊಂಡನು ಗೀತೆ ಹಾಡುವ ಮೂಲಕ ಪುನೀತ್ ರಾಜ್ ಕುಮಾರ್ ಅವರನ್ನು ಮೈಸೂರು ಜನತೆ ಜತೆ ಸ್ಮರಿಸಿದರು.

ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಲ್ ಅವರು ಸುನ್ ರಹಾ ಹೇನ ಗೀತೆ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.ನಂತರ ಕನ್ನಡದ ಚಕ್ರವರ್ತಿ ಚಿತ್ರದ ಒಂದು ಮಳೆ ಬಿಲ್ಲು, ಕೊಟ್ಟಿಗೊಬ್ಬ ಚಿತ್ರದ ಸಾಲುತಿಲ್ಲವೇ, ಸಂಜು ವೆಡ್ಸ್ ಗೀತಾ ಚಿತ್ರದ ಗಗನವೇ ಬಾಗಿ ಹೀಗೆ ವಿವಿಧ ಕನ್ನಡ ಚಿತ್ರಗೀತೆಗಳು ಹಾಗೂ ಹಿಂದಿ ಚಿತ್ರದ ವಿವಿಧ ಗೀತೆಗಳಿಗೆ ಮೈಸೂರು ಜನತೆ ಕುಣಿದು ಕುಪ್ಪಳಿಸುವಂತೆ ಮಾಡಿದರು.

ಕಾರ್ಯಕ್ರಮದಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡಿದ ಹಿಂದಿ ಚಿತ್ರದ ಗೀತೆಗಳಿಗಿಂತ ಕನ್ನಡ ಚಿತ್ರ ಗೀತೆಗಳಿಗೆ ಮೈಸೂರಿನ ಜನತೆ ಫುಲ್ ಖುಷ್.

ಇದೇ‌ ವೇಳೆ ಜಾನಪದ ಕಲಾತಂಡ ಮತ್ತು ಮಹಿಳೆಯರ ಡೊಳ್ಳು ಕುಣಿತ ಜನರ ಮನಸ್ಸು ಸೂರೆಗೊಂಡಿತು.

Advertisement
Tags :
MysoreUttanahalliYuva Dussehara
Advertisement
Next Article