HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಪರಿಸರಕ್ಕೆ ಕೊಡುಗೆ ನೀಡುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಿದ ಆರ್‌'ವಿ ವಿಶ್ವವಿದ್ಯಾಲಯ

ಆರ್‌ವಿ ವಿಶ್ವವಿದ್ಯಾನಿಲಯವು ದೇಶಭಕ್ತಿ ಜೊತೆಗೆ ಪರಿಸರ ಪ್ರೀತಿ ಮೆರೆಯುವ ಮೂಲಕ 78 ನೆ ಸ್ವಾತಂತ್ರ್ಯೋತ್ವ ಆಚರಿಸಿತು.
01:56 PM Aug 16, 2024 IST | ಅಮೃತ ಮೈಸೂರು
Advertisement

ಬೆಂಗಳೂರು,ಆ.16: ಆರ್‌ವಿ ವಿಶ್ವವಿದ್ಯಾನಿಲಯವು ದೇಶಭಕ್ತಿ ಜೊತೆಗೆ ಪರಿಸರ ಪ್ರೀತಿ ಮೆರೆಯುವ ಮೂಲಕ 78 ನೆ ಸ್ವಾತಂತ್ರ್ಯೋತ್ವ ಆಚರಿಸಿತು.

Advertisement

ಬೆಂಗಳೂರು ರೋಟರಿ ಇ-ಕ್ಲಬ್ ಸಹಯೋಗದಲ್ಲಿ ಕ್ಯಾಂಪಸ್ ನಲ್ಲಿ ಗಿಡಗಳನ್ನು ನೆಟ್ಟು ಹಸಿರು ಪರಿಸರಕ್ಕೆ ಕೊಡುಗೆ ನೀಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು.

ಆರ್‌ವಿ ವಿಶ್ವವಿದ್ಯಾನಿಲಯದ ಅಡ್ಮಿನಿಸ್ಟ್ರೇಟಿವ್ ಬ್ಲಾಕ್‌ನಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಆರ್‌ಐ ಡಿಸ್ಟ್ರಿಕ್ಟ್ 3191ರ ಜಿಲ್ಲಾ ಗವರ್ನರ್ ರೊಟೇರಿಯನ್ ಸತೀಶ್ ಮಾಧವನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈ ವೇಳೆ ಎಲ್ಲರೂ ರಾಷ್ಟ್ರಗೀತೆ ಹಾಡುವ ಮೂಲಕ ದೇಶಪ್ರೇಮ ಮೆರೆದರು.

ಕ್ಯಾಂಪಸ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ನೀರು ಹಾಕುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಬದ್ಧತೆಯನ್ನು ಪ್ರದರ್ಶಿಸಿದರು.

ಈ ವೇಳೆ ಮಾತನಾಡಿದ ಆರ್‌ವಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ವೈ.ಎಸ್.ಆರ್. ಮೂರ್ತಿ ಅವರು, ಸ್ವಾತಂತ್ರೋತ್ಸವದಂದು ಹಸಿರು ಮತ್ತು ಸುಸ್ಧಿರ ಭವಿಷ್ಯಕ್ಕೆ ಬೀಜ ಬಿತ್ತಿದ್ದೇವೆ. ಈ ಮೂಲಕ ದೇಶಪ್ರೇಮ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದ್ದೇವೆ, ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ಪರಿಸರ ಪ್ರಜ್ಞೆ ಬೆಳೆಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ಆರ್‌ಐ ಡಿಸ್ಟ್ರಿಕ್ಟ್ 3191ರ ಜಿಲ್ಲಾ ಗವರ್ನರ್ ರೊಟೇರಿಯನ್ ಸತೀಶ್ ಮಾಧವನ್ ಅವರು,ಗಿಡ ನೆಡುವ ಕಾರ್ಯಕ್ರಮ ಸ್ಫೂರ್ತಿದಾಯಕವಾಗಿದೆ. ಆರ್‌ವಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕಡೆಗೆ ಗಮನ ಹರಿಸುವುದನ್ನು ನೋಡಲು ಸಂತೋಷವಾಗಿದೆ ಎಂದು ಹೇಳಿದರು.

ಆರ್‌ವಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಸಹನಾ ಗೌಡ ಧನ್ಯವಾದ ಸಮರ್ಪಿಸಿದರು.

Advertisement
Tags :
BangaluruRVV College
Advertisement
Next Article