For the best experience, open
https://m.navayuganews.com
on your mobile browser.
Advertisement

ಮೈಸೂರು: ಕೇವಲ ಸ್ಮರಣೆ ಮಾತ್ರದಿಂದ ದತ್ತಾತ್ರೆಯ ಸ್ವಾಮಿಗಳು ಸಂತುಷ್ಟರಾಗುತ್ತಾರೆ, ಜಗತ್ತಿನ ಎಲ್ಲಾ ಕಷ್ಟ ನಿವಾರಣೆಗೆ ದತ್ತಾತ್ರೇಯ ಸ್ಮರಣೆ ಮಾಡಬೇಕು ಎಂದು ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ ಹೇಳಿದರು.

Advertisement

ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಕಳೆದ 55 ವರ್ಷಗಳಿಂದ ದತ್ತಾತ್ರೇಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷವೂ ಕೂಡ ಆಚರಿಸಲಾಯಿತು.

ಬೆಳಿಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಲ್ಲಿರುವ ದತ್ತಾತ್ರೇಯ ಸ್ವಾಮಿಗೆ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತೈಲಾಭಿಷೇಕ ನೆರವೇರಿಸಿ, ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.

ಇಡೀ ವಿಶ್ವದಲ್ಲಿ ಯುದ್ಧ ಭಯ ಕಾಡುತ್ತಿದೆ ಎಲ್ಲೆಲ್ಲೂ ನೆಮ್ಮದಿ ಇಲ್ಲದಂತಾಗಿದೆ ಹಾಗಾಗಿ ಶ್ರೀ ದತ್ತಾತ್ರೇಯ ಸ್ವಾಮಿ ಇಡೀ ಪ್ರಪಂಚವನ್ನು ರಕ್ಷಣೆ ಮಾಡಲಿ ಎಲ್ಲೆಡೆ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ದತ್ತಾತ್ರೇಯ ಸ್ವಾಮಿಗಳು ತೃತಯುಗದ ಅವತಾರ ಪುರುಷರು. ದೇವತೆಗಳು ರಾಕ್ಷಸರು ಮತ್ತು ಮನುಷ್ಯರಿಗೂ ಕೂಡ ಅವರು ಗುರುಗಳು. ಮನುಷ್ಯನಿಗೆ ಬುದ್ಧಿ ಕೆಟ್ಟಾಗ ಆರೋಗ್ಯ ಹದಗೆಟ್ಟಾಗ, ದಿಕ್ಕು ತಪ್ಪಿದಾಗ ದತ್ತಾತ್ರೆಯರ ಸ್ಮರಣೆ ಮಾಡುವುದು ಒಳ್ಳೆಯದು ಎಂದು ಶ್ರೀಗಳು ಸಲಹೆ ನೀಡಿದರು.

ದತ್ತಾತ್ರೇಯರು ಪೂರ್ಣ ವಿಷ್ಣು ಸ್ವರೂಪ. ದತ್ತಾತ್ರೇಯ ಸ್ವಾಮಿಯ ಆರಾಧನೆ ಮಾಡಿದರೆ ವಿಷ್ಣುವಿನ ಆರಾಧನೆ ಮಾಡಿದಂತೆ, ಶಿವನನ್ನು ಆರಾಧನೆ ಮಾಡಿದಂತೆ, ಬ್ರಹ್ಮ ಅಂದರೆ ಜ್ಞಾನವನ್ನು ಆರಾಧನೆ ಮಾಡಿದಂತೆ ಎಂದು ಬಣ್ಣಿಸಿದರು.

ಇಂದು ನಮ್ಮ ಆಶ್ರಮದಲ್ಲಿರುವ ಪುರಾತನ ಶ್ರೀ ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ ಮತ್ತು ಸುಗಂಧದ್ರವ್ಯ ಅಭಿಷೇಕವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ.

ಇಡೀ ವಿಶ್ವ ಮತ್ತು ಪ್ರಜೆಗಳು ಪ್ರಜಾಪ್ರತಿನಿಧಿಗಳು ಮಕ್ಕಳಾದಿಯಾಗಿ ಎಲ್ಲ ರಂಗದಲ್ಲಿರುವವರಿಗೂ ದತ್ತಾತ್ರೇಯರು ಆಶೀರ್ವಾದ ಮಾಡಲೆಂದು ಲೋಕ ಕಲ್ಯಾಣಾರ್ಥವಾಗು ಈ ಅಭಿಷೇಕಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಇಂದು ಬೆಳಿಗ್ಗೆ ಪೌರ್ಣಮಿ ಹಾಗೂ ಶ್ರೀ ದತ್ತಾತ್ರೇಯ ಜಯಂತಿ ಪ್ರಯುಕ್ತ ಪವಮಾನ ಹೋಮ ಮತ್ತು ದತ್ತಾತ್ರೇಯ ವಜ್ರ ಮಂತ್ರ ಹೋಮ ನೆರವೇರಿತು.

ನಂತರ ಶ್ರೀ ದತ್ತಾತ್ರೇಯ ಸ್ವಾಮಿಗೆ ಭಕ್ತರಿಂದ
ಸಹಸ್ರ ಕಳಶ ತೈಲಾಭಿಷೇಕ ಮಾಡಲಾಯಿತು.

ಪೂಜಾ ಕಾರ್ಯಗಳು ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ನೆರವೇರಿತು.

Advertisement
Tags :
Advertisement