HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಜಿಲ್ಲಾ ಮಟ್ಟದಲ್ಲಿ ಕೈಮಗ್ಗ ತರಬೇತಿ ಶಾಲೆ ತೆರೆಯಲು ರಾಜಣ್ಣ ಮನವಿ

ಕೈಮುಗ್ಗ ದಿನಾಚರಣೆಯ ಅಂಗವಾಗಿ ಬಿಜೆಪಿ ಚಾಮುಂಡೇಶ್ವರಿ ಗ್ರಾಮಾಂತರ ಮಹಿಳಾ ಮೋರ್ಚಾದಿಂದ ಹಿರಿಯ ಕೈಮುಗ್ಗ ನೇಕಾರರನ್ನು ಸನ್ಮಾನಿಸಲಾಯಿತು
06:58 PM Aug 07, 2024 IST | ಅಮೃತ ಮೈಸೂರು
Advertisement

ಮೈಸೂರು, ಆ.7: ಕೈಮಗ್ಗದ ತರಬೇತಿ ಶಾಲೆಗಳನ್ನು ಎಲ್ಲಾ ಜಿಲ್ಲಾ ಮಟ್ಟದಲ್ಲಿ ತೆರೆದು ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಬೇಕೆಂದು ಕೈಮುಗ್ಗ ಹಿರಿಯ ನೇಕಾರ ರಾಜಣ್ಣ ಸರ್ಕಾರಕ್ಕೆ ಮನವಿ ಮಾಡಿದರು.

Advertisement

ಮೈಸೂರಿನ ಮೇಟಗಳ್ಳಿಯ ಗಣಪತಿ ವೀವಿಂಗ್ ಕೈಮಗ್ಗ ಫ್ಯಾಕ್ಟರಿ ಆವರಣದಲ್ಲಿ
ಕೈಮುಗ್ಗ ದಿನಾಚರಣೆಯ ಅಂಗವಾಗಿ ಬಿಜೆಪಿ ಚಾಮುಂಡೇಶ್ವರಿ ಗ್ರಾಮಾಂತರ ಮಹಿಳಾ ಮೋರ್ಚಾದಿಂದ ಹಿರಿಯ ಕೈಮುಗ್ಗ ನೇಕಾರರನ್ನು ಸನ್ಮಾನಿಸಲಾಯಿತು

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಣ್ಣ ಅವರು,ಈ ರೀತಿಯ ಪರಂಪರೆ ಭಾರತ ದೇಶದಲ್ಲಿ ಮಾತ್ರ ಎಂಬುದು ನಮಗೆ ಹೆಮ್ಮೆ, ಹಾಗಾಗಿ ಈ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಸರ್ಕಾರದ ಕರ್ತವ್ಯ ಎಂದು ಹೇಳಿದರು.

ಭಾರತದಲ್ಲಿ ನೇಕಾರರಿಗೆ ಮತ್ತು ಕೈಮುಗ್ಗದ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಆಗಸ್ಟ್ 7ರಂದು ಕಳೆದ 2015 ರಿಂದ ಕೈಮಗ್ಗ ದಿನಾಚರಣೆ ಆಚರಿಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.

ಅಲ್ಲದೆ 1905ರಲ್ಲಿ ನಡೆದ ಸ್ವದೇಶಿ ಆಂದೋಲನ ಕೂಡ ಇದೇ ದಿನ ಆರಂಭವಾದ ಕಾರಣ ಕೈಮಗ್ಗದ ದಿನಾಚರಣೆಯನ್ನು ಆಗಸ್ಟ್ 7ರಂದು ನಡೆಸಲು ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಾಚೀನ ಸಾಂಪ್ರದಾಯಿಕ ಪರಂಪರೆಯ ಉಡುಪುಗಳಲ್ಲಿ ಕೈಮಗ್ಗದ ಉಡುಪುಗಳು ಒಂದಾಗಿದ್ದು ಸರಳ ಮತ್ತು ವಿಶೇಷತೆಯಿಂದ ಕೂಡಿರುತ್ತದೆ ನೇಕಾರರ ಕೈಚಳಕ ಮತ್ತು ಪರಿಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ರಾಜಣ್ಣ ಬಣ್ಣಿಸಿದರು.

ಮಹಿಳಾಮೂರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಚಾಮುಂಡೇಶ್ವರಿ ಮಹಿಳಾಮೂರ್ಚಾ ಅಧ್ಯಕ್ಷೆ ಸವಿತಾ ಗೌಡ, ಪ್ರಧಾನ ಕಾರ್ಯದರ್ಶಿ ಯಮುನಾ ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಕೃಷ್ಣವೇಣಿ, ಗೀತಾ ಪ್ರಮೋದ್, ಪದಾಧಿಕಾರಿಗಳಾದ ರೇಖಾ ಶಂಕರ್,ಶಾಲಿನಿ,ನಂದಿನಿ, ಮಾಯ, ನಾಗಮಣಿ ಮತ್ತಿತರರು ಹಾಜರಿದ್ದರು.

Advertisement
Tags :
HandloomMysore
Advertisement
Next Article