ಸಮಾಜ ಮುಖಿಯಾಗಿ ಕರ್ತವ್ಯ ನಿರ್ವಹಿಸಿ-ಡಾ ಪಿ. ಶಿವರಾಜು
ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ಸರ್ಕಾರದ ವತಿಯಿಂದ ಮಾಸಿಕ ಸಹಾಯಧನ
ನೀಡುವ ಬಗ್ಗೆ ಅವರು ಪರಿಶಿಷ್ಟ ಜಾತಿಯ ಕಾನೂನು ಪದವೀಧರರ ಜತೆ ಅಪರ ಜಿಲ್ಲಾಧಿಕಾರಿ -ಡಾ ಪಿ. ಶಿವರಾಜು ಮಾತನಾಡಿದರು.
07:15 PM Dec 09, 2024 IST
|
ಅಮೃತ ಮೈಸೂರು
Advertisement
ಮೈಸೂರು: ಸಮಾಜ ಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕಾನೂನು ಪದವೀಧರರಿಗೆ ಅಪರ ಜಿಲ್ಲಾಧಿಕಾರಿ -ಡಾ ಪಿ. ಶಿವರಾಜು ಸಲಹೆ ನೀಡಿದರು.
Advertisement
ಮೈಸೂರು ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ಸರ್ಕಾರದ ವತಿಯಿಂದ ಮಾಸಿಕ ಸಹಾಯಧನ
ನೀಡುವ ಬಗ್ಗೆ ಅವರು ಪರಿಶಿಷ್ಟ ಜಾತಿಯ ಕಾನೂನು ಪದವೀಧರರ ಸಂದರ್ಶನ ನಡೆಸಿ ಆಯ್ಕೆ ಮಾಡಿ ಮಾತನಾಡಿದರು.
ನೀವೆಲ್ಲರೂ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿ ಸಮಾಜಕ್ಕೆ ನಿಮ್ಮದೇ ರೀತಿಯಲ್ಲಿ ಕೊಡುಗೆಯನ್ನು ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಂಗೇಗೌಡ ಹಾಗೂ ಅರ್ಜಿಸಲ್ಲಿಸಿದ್ದ ಜಿಲ್ಲೆಯ ಅರ್ಹ ಕಾನೂನು ಪದವೀಧರರು ಪಾಲ್ಗೊಂಡಿದ್ದರು.
Advertisement
Next Article