ಮನೆಗೆ ತೆರಳಿದ ಪವಿತ್ರಾ ಗೌಡ
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ತೆರಳಿದರು.
07:15 PM Dec 17, 2024 IST
|
ಅಮೃತ ಮೈಸೂರು
Advertisement
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
Advertisement
ಪವಿತ್ರಾ ಗೌಡ ಮಂಗಳವಾರ ಜೈಲಿನಿಂದ ಹೊರಬಂದ ಕೂಡಲೇ ತಲಘಟ್ಟ ಪುರದ ವಜ್ರ ಮುನೇಶ್ವರ ದೇವಸ್ಥಾನಕ್ಕೆ ತಾಯಿ ಜೊತೆ ಭೇಟಿ ನೀಡಿದರು.
6 ತಿಂಗಳ ಬಳಿಕ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ಮನೆ ದೇವರ ಸನ್ನಿಧಿಗೆ ಪವಿತ್ರಾ ಕುಟುಂಬ ಭೇಟಿ ನೀಡಿತು.
ಪೂಜೆ ಸಲ್ಲಿಸುವ ವೇಳೆ ಪವಿತ್ರಾ ತಾಯಿ ದರ್ಶನ್ ಹೆಸರಲ್ಲೂ ಅರ್ಚನೆ ಮಾಡಿಸಿದರು. ದೇವಾಲಯದಲ್ಲಿ ಪವಿತ್ರಾ ಗೌಡ ಕಣ್ಣೀರು ಹಾಕಿದರು.
ಜೈಲಧಿಕಾರಿಗಳ ಕೈಗೆ ಜಾಮೀನು ಪ್ರತಿ
ತಡವಾಗಿ ತಲುಪಿದ ಕಾರಣ ಶುಕ್ರವಾರವೆ ಬಿಡುಗಡೆಯಾಗಬೇಕಿದ್ದ ಪವಿತ್ರಾ ಗೌಡ ಜೈಲಿನಲ್ಲೇ ಇರಬೇಕಾಯಿತು.ಎಲ್ಲಾ ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಇಂದು ಹೊರಬಂದರು.
ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಆರ್‌ಆರ್ ನಗರದ ನಿವಾಸಕ್ಕೆ ಪವಿತ್ರಾ ಕುಟುಂಬ ತೆರಳಿತು.
Advertisement
Next Article