ಬಸ್ ಹರಿದು ವೃದ್ಧ ದುರ್ಮರಣ
02:03 PM Aug 11, 2024 IST
|
ಅಮೃತ ಮೈಸೂರು
Advertisement
ಹುಣಸೂರು,ಆ.11: ರಸ್ತೆ ದಾಟುತ್ತಿದ್ದ ವೃದ್ದನ ಮೇಲೆ ಕೆಎಸ್ ಆರ್ ಟಿಸಿ ಬಸ್ ಹರಿದು ಆತ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.
Advertisement
ಮೈಸೂರು ಹುಣಸೂರು ಮುಖ್ಯ ರಸ್ತೆಯ ಬನ್ನಿಕುಪ್ಪೆ ಬಳಿ ಈ ಘಟನೆ ನಡೆದಿದ್ದು,ತಮಿಳುನಾಡು ಮೂಲದ ದೊರೆಸ್ವಾಮಿ(67) ಮೃತಪಟ್ಟಿದ್ದಾರೆ.
ಮಗಳ ಮನೆಗೆ ಬಂದಿದ್ದ ದೊರೆಸ್ವಾಮಿ ಟೀ ಕುಡಿಯಲು ರಸ್ತೆ ದಾಟುತ್ತಿದ್ದಾಗ ಬಸ್ ಢಿಕ್ಕಿ ಹೊಡೆದಿದೆ.
ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡರು.
Advertisement