HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ರಂಗಾಯಣದಲ್ಲಿ ನಾಟ್ಯದೇವಚರಿತೆ ನಾಟಕ

ಮೈಸೂರಿನ ರಂಗಾಯಣ ಕ್ಯಾಂಪಸ್‌ನಲ್ಲಿರುವ ಕಿರು ರಂಗಮಂದಿರದಲ್ಲಿ ನ.7ರಿಂದ ಸಂಜೆ ನಾಟ್ಯದೇವಚರಿತೆ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
02:43 PM Nov 08, 2024 IST | ಅಮೃತ ಮೈಸೂರು
Advertisement

ಮೈಸೂರು: ಮೈಸೂರಿನ ರಂಗಾಯಣ ಕ್ಯಾಂಪಸ್‌ನಲ್ಲಿರುವ ಕಿರು ರಂಗಮಂದಿರದಲ್ಲಿ
ನ.7ರಿಂದ ಸಂಜೆ ರಂಗವಲ್ಲಿ ‌ರಂಗಸಂಭ್ರಮ ನಾಟಕೋತ್ಸವ ನಡೆಯುತ್ತಿದೆ.

Advertisement

ಇಂದು ಸಂಜೆ 5.30ಕ್ಕೆ ಮೈಸೂರು ಪೊಲೀಸ್ ಬ್ಯಾಂಡ್, ಕೆ ಎಆರ್ ಪಿ ಮೌಂಟೆಡ್ ಕಂಪನಿ ಮೈಸೂರು ವತಿಯಿಂದ.

ನಂತರ ಕ್ಯಾಂಪಸ್‌ನಲ್ಲಿರುವ ಕಿರು ರಂಗಮಂದಿರದಲ್ಲಿ
ನಾಟ್ಯದೇವಚರಿತೆ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಸಂಚಯ ಅವರು ಇಂದು ಸಂಜೆ‌ 7 ಗಂಟೆಗೆ ಕಿರು ರಂಗಮಂದಿರ ದಲ್ಲಿ ನಾಟ್ಯದೇವಚರಿತೆ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಈ ನಾಟಕದ ನಿರ್ದೇಶನವನ್ನು ಪೃಥ್ವಿ ವೇಣುಗೋಪಾಲ್ ನಿರ್ವಹಿಸಲಿದ್ದಾರೆ.

ನ.9 ಸಂಜೆ 5.30ಕ್ಕೆ ಸುಗಮ ಸಂಗೀತ.ಮೈಸೂರಿನ ನಿತಿನ್ ರಾಜಾರಾಮ್ ಶಾಸ್ತ್ರಿ ಮತ್ತು ವೃಂದದವರಿಂದ.

ಸಂಜೆ 7‌ಗಂಟೆಗೆ ಏ ಫ್ರೆಂಡ್ ಬಿಯಾಂಡ್ ದಿ ಫೆನ್ಸ್ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ನಿರ್ದೇಶನ ಶ್ರವಣ್ ಹೆಗ್ಗೋಡು.ಪ್ರಸ್ತುತ ಪಡಿಸುವವರು ಕಲಾಭಿ ಥಿಯೇಟರ್ ಮಂಗಳೂರು.

ನ.10ರಂದು ಸಂಜೆ 4.30ಕ್ಕೆ ಬ್ರಾಸ್ ಬ್ಯಾಂಡ್ ವಾದ್ಯಗೋಷ್ಠಿ. ಮೈಸೂರು, ಗಾಂಧಿನಗರ ಭಾರತ್ ಬ್ರಾಸ್ ಬ್ಯಾಂಡ್ ಅವರಿಂದ.

ಸಂಜೆ‌ 7ಕ್ಕೆ ಶಿವೋಹಂ ನಾಟಕ ಪ್ರದರ್ಶನ. ನಿರ್ದೇಶನ ಗಣೇಶ್ ಮಂದಾರ್ತಿ. ಪ್ರಸ್ತುತಪಡಿಸುವವರು ಕ್ರಾನಿಕಲ್ಸ್ ಆಫ್ ಇಂಡಿಯಾ, ಬೆಂಗಳೂರು ಅವರಿಂದ.

ನಾಟಕಗಳಿಗೆ 100 ರೂ ಟಿಕೆಟ್ ದರ ವಿಧಿಸಲಾಗಿದೆ ಉಳಿದ ಕಾರ್ಯಕ್ರಮಗಳು ಉಚಿತ.

Advertisement
Tags :
MysoreRangayana
Advertisement
Next Article