HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ರಾಷ್ಟ್ರ ಮಟ್ಟದ ಟಂಬ್ಲಿಂಗ್ ಸ್ಪರ್ಧೆಯಲ್ಲಿ ಅನ್ವಿಗೆ ಬೆಳ್ಳಿ ಪದಕ

ಕಳೆದ ಡಿಸೆಂಬರ್ 29 ಮತ್ತು 30 ರಂದು ಗುಜರಾತ್‌ ನ ಸೂರತ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಟಂಬ್ಲಿಂಗ್ ಸ್ಪರ್ಧೆಯಲ್ಲಿ ಮೈಸೂರಿನ ಅನ್ವಿ ಸಾಧನೆ ಮಾಡಿದ್ದಾರೆ.
03:26 PM Jan 09, 2025 IST | ಅಮೃತ ಮೈಸೂರು
Advertisement

ಮೈಸೂರು: ಕಳೆದ ಡಿಸೆಂಬರ್ 29 ಮತ್ತು 30 ರಂದು ಗುಜರಾತ್‌ ನ ಸೂರತ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಟಂಬ್ಲಿಂಗ್ ಸ್ಪರ್ಧೆಯಲ್ಲಿ ಮೈಸೂರಿನ ಅನ್ವಿ ಸಾಧನೆ ಮಾಡಿದ್ದಾರೆ.

Advertisement

ಪವಿತ್ರ ಮತ್ತು ಅನೂಪ್ ದಂಪತಿಗಳ ಪುತ್ರಿ 5ನೇ ತರಗತಿ ವಿದ್ಯಾರ್ಥಿನಿ ಅನ್ವಿ ಎ. ಹರಿತಸ ಈ ಸಾಧನೆ ಮಾಡಿದ್ದಾರೆ.

ಅನ್ವಿ ಅವರು ಟಂಬ್ಲಿಂಗ್ ಸ್ಪರ್ಧೆಯಲ್ಲಿ 2ನೇ ಸ್ಥಾನ‌ ಪಡೆದು ಬೆಳ್ಳಿ ಪದಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇವರು ಮೈಸೂರು ನಗರದ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ವಿದ್ವತ್ ಸುಂದರರಾಜು ಹಾಗೂ ಲೋಕೇಶ್.ಬಿ ಎಂಬುವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

Advertisement
Tags :
AnviGujaratMysoreTumbling
Advertisement
Next Article