HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

NSS : ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಸದಭಿರುಚಿ ಚಿಂತನೆ ಹೊರಹೊಮ್ಮಲು ಸಾಧ್ಯ - ಲಯನ್ ಸಿ.ಆರ್ .ದಿನೇಶ್

07:05 PM Aug 25, 2024 IST | ಅಮೃತ ಮೈಸೂರು
featuredImage featuredImage
Advertisement

ಮೈಸೂರು, ಆ.25 : ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿ ಹೆಚ್ಚಿಸಬೇಕಾದರೆ ಕಾಲೇಜು ಹಾಗೂ ಮನೆಗಳಿಂದ ಹೊರಬಂದು ಸಮುದಾಯದ ಸಂಪರ್ಕವನ್ನು ಇಟ್ಟುಕೊಂಡರೆ ತಮ್ಮ ಜೀವನಮಟ್ಟವನ್ನು ವೃದ್ಧಿ ಮಾಡಿಕೊಳ್ಳಲು ಸಾಧ್ಯ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಲಯನ್ ಸಿ. ಆರ್ ದಿನೇಶ್ ಅಭಿಪ್ರಾಯ ಪಟ್ಟಿದ್ದಾರೆ.

ಡಿ ಪೌಲ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಹಲವಾರು ಉದಾತ್ತ ಚಿಂತನೆಗಳನ್ನು ವಿದ್ಯಾರ್ಥಿಗಳು ಪಡೆಯಬಹುದು ಎಂದು ಎನ್'ಎನ್'ಎಸ್'ನ ಮಹತ್ವವನ್ನು ತಿಳಿಸಿದರು.

Advertisement

ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಡಾ. ಬೈಜು ಅಂಟೋನಿ ಸಿಎಮ್ ವಿದ್ಯಾರ್ಥಿಗಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ದಂಡಣೆಗೆ ಒಳಪಡಿಸುವ ಮೂಲಕ ಅವರ ಮನಸ್ಸನ್ನು ಸ್ವಚ್ಛಗೊಳಿಸುವ ಪ್ರಯತ್ನ ಇಂತಹ ಘಟಕಗಳು ಮಾಡಲಿವೆ ಎಂದರು.

ಘಟಕದ ಕಾರ್ಯಕ್ರಮ ಅಧಿಕಾರಿ ಅಜಯ್ ರವರು ಪ್ರಸ್ತಾವಿಕ ಭಾಷಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಲಂಕೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಸ್ವಾಗತ ಪ್ರಿಯಾ , ವಂದನೆ ಸೆಜಾ ಕಾರ್ಯಕ್ರಮದ ನಿರೂಪಣೆಯನ್ನು ಅಪೂರ್ವ ಮಾಡಿದರು.

Advertisement
Tags :
De Paul Degree collegeDr.C R DineshMysoreNational Service SchemeNSS
Advertisement