ಡಿಸೆಂಬರ್ ನಲ್ಲಿ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್
04:52 PM Nov 06, 2024 IST
|
ಅಮೃತ ಮೈಸೂರು
Advertisement
ಮೈಸೂರು: 4ನೇ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ 2024 ಇದೇ ಡಿಸೆಂಬರ್ ನಲ್ಲಿ ನಡೆಯಲಿದೆ ಎಂದು ಫೆಸ್ಟಿವಲ್ ಸಂಸ್ಥಾಪಕಿ ಹಾಗೂ ನಿರ್ದೇಶಕರಾದ ರಂಜಿತಾ ಸುಬ್ರಹ್ಮಣ್ಯ ತಿಳಿಸಿದರು.
Advertisement
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಂಜಿತಾ ಈ ವರ್ಷ ಸುಮಾರು 200 ಕ್ಕೂ ಹೆಚ್ಚು ದೇಶ ವಿದೇಶಗಳಿಂದ ಸಿನಿಮಾಗಳು ಭಾಗವಹಿಸಿತ್ತಿದೆ ಇದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಇದೇ ವೇಳೆ ವಿದ್ವಾತ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಹಾಗೂ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನ ಟೈಟಲ್ ಸ್ಫಾನ್ಸರ್ಸ್ ಹಾಗೂ ಇದರ ಮಾಲೀಕ ಸೋಮಶೇಖರ್ ನಾಯಕ್ ಕಾರ್ಯಕ್ರಮ ಯಶಸ್ವಿಯಾಗಿಲಿ ತಂಡದ ಜೊತೆ ಕಾರ್ಯ ನಿರ್ವಹಿಸುತ್ತಿರುವುದು ನಮಗೆ ಖುಷಿ ತಂದಿದೆ ಎಂದು ತಿಳಿಸಿದರು.
ತಂಡದ ನಿರ್ದೇಶಕರು ಹಾಗೂ ಸಹ ಸಂಸ್ಥಾಪಕ ದುರ್ಗ ಪ್ರಸಾದ್, ನಿರ್ದೇಶಕ ಇಂದ್ರ ನೈರ್ ಹಾಗೂ ಅಮರ್ ನಾರಾಯಣ್ ಉಪಸ್ಥಿತರಿದ್ದರು.
Advertisement