ಬೆಳ್ಳಂ ಬೆಳಿಗ್ಗೆ ಹಿಂಡಲಗಾ ಜೈಲಿನ ಮೇಲೆ 200 ಕ್ಕೂ ಹೆಚ್ಚು ಪೊಲೀಸರ ದಾಳಿ
ಬೆಳಗಾವಿಯ ಹಿಂಡಲಗಾ ಜೈಲಿನ ಮೇಲೆ ಬೆಳ್ಳಂ ಬೆಳಿಗ್ಗೆ ಪೊಲೀಸರು ಮತ್ತು ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಶಾಕ್ ನೀಡಿದರು.
02:05 PM Aug 10, 2024 IST
|
ಅಮೃತ ಮೈಸೂರು
Advertisement
ಬೆಳಗಾವಿ,ಆ.10: ಬೆಳಗಾವಿಯ ಹಿಂಡಲಗಾ ಜೈಲಿನ ಮೇಲೆ ಬೆಳ್ಳಂ ಬೆಳಿಗ್ಗೆ ಪೊಲೀಸರು ಮತ್ತು ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಶಾಕ್ ನೀಡಿದರು.
Advertisement
ಮುಂಜಾನೆ ಸುಮಾರು 5 ಗಂಟೆಗೆ ಕಮಿಷನರ್ ಇಡಾ ಯಾರ್ಟಿನ್ ಮಾರ್ಬನಿಂಗ್ ನೇತೃತ್ವದಲ್ಲಿ ಹಿಂಡಲಗಾ ಜೈಲಿನ ಮೇಲೆ ದಾಳಿ ನಡೆಯಿತು.
40 ಅಧಿಕಾರಿಗಳು ಮತ್ತು 220ಕ್ಕೂ ಹೆಚ್ಚು ಸಿಬ್ಬಂದಿ ಈ ದಾಳಿ ನಡೆಸಿದರು, ಈ ವೇಳೆ
ಮೂರು ಚಾಕು,10 ತಂಬಾಕು ಪೊಟ್ಟಣ, ಸಿಗರೇಟು, ಸಣ್ಣ ಹೀಟರ್ ತಂತಿ ಬಂಡಲ್, ಎಲೆಕ್ಟ್ರಿಕ್ ತಾತ್ಕಾಲಿಕ ಒಲೆ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಸೇರಿ 260ಕ್ಕೂ ಅಧಿಕ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement
Next Article