HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ನಂಜುಂಡೇಶ್ವರನಿಗೆ ಭಕ್ತರ ಪತ್ರಗಳು:ದೇವಾಲಯದ ಅವ್ಯವಸ್ಥೆ ಅನಾವರಣ

01:50 PM Aug 07, 2024 IST | ಅಮೃತ ಮೈಸೂರು
Advertisement

ನಂಜನಗೂಡು,ಆ.7: ದಕ್ಷಿಣಕಾಶಿ ನಂಜನಗೂಡಿನ ನಂಜುಂಡೇಶ್ವರನಿಗೆ ಭಕ್ತರು ಪ್ರೀತಿಯಿಂದ ಪತ್ರಗಳನ್ನು ಬರೆದು ದೇವಾಲಯದ ಅವ್ಯವಸ್ಥೆ ಬಗ್ಗೆ‌ ಅಳಲು ತೋಡಿಕೊಂಡು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

Advertisement

ನಿನ್ನೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸುವ ನಂಜುಂಡೇಶ್ವರನಿಗೆ ಈ ಬಾರಿ ಪ್ರೀತಿಯ ಭಕ್ತರಿಂದ ಪತ್ರಗಳೂ ಸಲ್ಲಿಕೆಯಾಗಿವೆ.

ನಿನ್ನ ನೋಡಲು ಬರುವ ಲಕ್ಷಾಂತರ ಭಕ್ತರಿಗೆ ಕೆಟ್ಟ ವ್ಯವಸ್ಥೆಯಿಂದ ಪರಿಹಾರ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.

ಒಂದು ಪತ್ರದಲ್ಲಿ ನನ್ನ ತಾತ,ನನ್ನ ತಂದೆ ನಾನು ಹಾಗೂ ನನ್ನ ಮಗ ಎಲ್ಲರೂ ನಿನ್ನ ಭಕ್ತರೇ.ಬಹಳ ದೂರದಿಂದ ನಿನ್ನ ಕಾಣಲು ಪ್ರತಿ ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಬರುತ್ತೇವೆ.

ನಿನ್ನ ದರುಶನದಿಂದ ನಮ್ಮ ಕಷ್ಟಗಳೆಲ್ಲಾ ದೂರವಾಗಿದೆ ಒಡೆಯಾ, ಆದರೆ ನಿನ್ನ ನೋಡಲು ಬರುವಾಗ ತುಂಬಾ ಕಷ್ಟವಾಗುತ್ತಿದೆ.

ರಾತ್ರಿ ಮಲಗುವುದಕ್ಕೆ ಚಿಕ್ಕ ಜಾಗವೂ ಇರುವುದಿಲ್ಲ.ಬೆಳಿಗ್ಗೆ ಸ್ನಾನಕ್ಕೆ ಕಪಿಲಾ ನದಿಗೆ ಹೋದರೆ ಎಲ್ಲಿ ನೋಡಿದರೂ ಕಸ, ಕಸ. ಹೇಗೋ ಸ್ನಾನ ಮಾಡಿದರೆ ನನ್ನ ಮಡದಿಗೆ,ತಾಯಿಗೆ ಬಟ್ಟೆ ಬದಲಿಸಲೂ ಜಾಗವಿಲ್ಲ.

ಇನ್ನು ಉರುಳು ಸೇವೆ ಮಾಡಲು ವ್ಯವಸ್ಥೆ ಇಲ್ಲ,ಹೀಗೆ ಇನ್ನೂ ಅನೇಕ ತೊಂದರೆಗಳನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ,ರಾಜಕಾರಣಿಗಳಿಗೆ ಪತ್ರ ಬರೆದು ಸಾಕಾಗಿದೆ.ಕೊನೆಯದಾಗಿ ನಿನಗೇ ಪತ್ರ ಬರೆದಿದ್ದೇನೆ.ನಮ್ಮಂತಹ ಲಕ್ಷಾಂತರ ಭಕ್ತರಿಗೆ ಕೆಟ್ಟ ವ್ಯವಸ್ಥೆಯಿಂದ ಪರಿಹಾರ ಕೊಡು ತಂದೆ ಎಂದು ಬೇಡಿಕೊಂಡಿದ್ದಾರೆ.

ಎರಡನೇ ಪತ್ರದಲ್ಲಿ ಅಸಂಖ್ಯಾತ ಭಕ್ತರನ್ನ ಹೊಂದಿರುವ ನಿನಗೆ ಪ್ರತಿತಿಂಗಳು ಕೋಟ್ಯಾಂತರ ಹಣ ನಿನ್ನ ಮಡಿಲಿಗೆ ಹಾಕುತ್ತಿದ್ದಾರೆ,ಇದು ಸಂತಸದ ‌ವಿಷಯ.

ದೇವಾಲಯಕ್ಕೆ ಬರುವ ಭಕ್ತರಿಗೆ ಆಡಳಿತ ಮಂಡಳಿಯಿಂದ ವಯಾವುದೇ ಮೂಲಭೂತ ಸೌಕರ್ಯ ದೊರೆಯುತ್ತಿಲ್ಲ,ಇದು ಯಾತನೆ ಹಾಗೂ ತಳಮಳ ತರುವ ವಿಷಯವಾಗಿದೆ.

ಭಕ್ತರು ತಂಗಲು ವ್ಯವಸ್ಥೆ ಇಲ್ಲ ಎಂಬ ಕೊರಗು ಇದೆ,ದೇವಾಲಯದ ಸಿಬ್ಬಂದಿ ಭಕ್ತರನ್ನ ನಿಕೃಷ್ಟವಾಗಿ ಕಾಣುತ್ತಿದ್ದಾರೆ ಅವರಿಗೆ ಒಳ್ಳೆಯ ಬುದ್ದಿ ಕೊಡು ಎಂದು ಕೋರಿದ್ದಾರೆ.

ಭಕ್ತರಿಂದ ಸಂಗ್ರಹವಾಗುವ ದೇಣಿಗೆ ಹಣದಲ್ಲಿ ವಸತಿ ಸಂಕೀರ್ಣ ನಿರ್ಮಿಸುವುದಾಗಿ ಹೇಳಿದ್ದರು,ಇದೀಗ ವಸತಿ ಸಂಕೀರ್ಣಕ್ಕೆ ಜಾಗವಿಲ್ಲ ಎಂದು ಹೇಳುತ್ತಿರುವ ಆಡಳಿತ ಮಂಡಳಿಗೆ ವಸತಿ ಸಂಕೀರ್ಣ ನಿರ್ಮಿಸಲು ಪ್ರೇರಣೆ ನೀಡು ಹಾಗೂ ವಿವೇಕ ನೀಡು.

ವಿಶೇಷ ದಿನಗಳಲ್ಲಿ ಬರುವ ಭಕ್ತರು ಪಡುವ ಕಷ್ಟಗಳನ್ನ ಅಧಿಕಾರಿಗಳು ನೋಡಿದರೆ ಅವರಿಗೆ ವಾಸ್ತವಾಂಶ ಅರಿವಾಗಲಿದೆ.ಹಾಗಾಗಿ ತುರ್ತಾಗಿ ವಸತಿ ಸಂಕೀರ್ಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲು ಅವರಿಗೆ ಬುದ್ದಿ ಕೊಡು ಎಂದು ಶ್ರೀಕಂಠೇಶ್ವರನಾದ ನಿಮ್ಮ ಬಳಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.

ಶ್ರೀಕಂಠನಿಗೆ ಪತ್ರದ ಮೂಲಕ ಮಾಡಿರುವ ಭಕ್ತರ ಮನವಿಯಿಂದಾದರೂ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕಣ್ಣು ತೆರೆಸಲಿ.

Advertisement
Tags :
DevoteesLord NanjundeshwaraMysoreNanjanagudu
Advertisement
Next Article