HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಕೃಷಿಕರಿಗೆ ಹೆಣ್ಣು ಕೊಡಲು ನಿರಾಕರಿಸುವ ಮನೋಭಾವ ಬದಲಾಗಲಿ:ಬಸವಯೋಗಿ ಪ್ರಭು

ಮೈಸೂರಿನ ಜಯಪುರ ಹೋಬಳಿ ದಾರಿಪುರದ ಗುರು ಕೆರೂರುಸ್ವಾಮಿ ಗದ್ದುಗೆ ಆವರಣದಲ್ಲಿ ಲಿಂಗಾಯತ ಧರ್ಮ ಜಾಗೃತಿ ಲಿಂಗದೀಕ್ಷೆ ಶಿವಯೋಗವನ್ನು ಬಸವಯೋಗಿ ಪ್ರಭು ನೆರವೇರಿಸಿದರು
07:37 PM Aug 13, 2024 IST | ಅಮೃತ ಮೈಸೂರು
Advertisement

ಮೈಸೂರು, ಆ.13: ಪ್ರಸ್ತುತ ಕೃಷಿ ಮಾಡುವವರಿಗೆ ಹೆಣ್ಣು ಕೊಡಲು ನಿರಾಕರಿಸುವ ಮನೋಭಾವ ಕಂಡು ಬರುತ್ತಿದ್ದು ಇದು ಬದಲಾಗಬೇಕಿದೆ ಎಂದು
ನರಸಿಂಹರಾಜಪುರದ ಬಸವಕೇಂದ್ರದ ಬಸವಯೋಗಿಪ್ರಭುಗಳು ಹೇಳಿದರು.

Advertisement

ಮೈಸೂರಿನ ಜಯಪುರ ಹೋಬಳಿ ದಾರಿಪುರದ ಗುರು ಕೆರೂರುಸ್ವಾಮಿ ಗದ್ದುಗೆ ಆವರಣದಲ್ಲಿ ಲಿಂಗಾಯತ ಧರ್ಮ ಜಾಗೃತಿ ಲಿಂಗದೀಕ್ಷೆ ಶಿವಯೋಗವನ್ನು ನೇರವೇರಿಸಿ ಶ್ರೀಗಳು ಮಾತನಾಡಿದರು.

ಕಾಯಕದಲ್ಲಿ ಯಾವುದು ಮೇಲಲ್ಲ ಕೀಳಲ್ಲ ದೇವ ಸಹಿತ ಭಕ್ತ ಮನೆಗೆ ಬಂದಡೆ ಕಾಯಕ ಯಾವುದೆಂದು ಬೆಸಗೊಂಡೆನಾದೊಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಎಂದು ಹೇಳುತ್ತಾರೆ ವಿಶ್ವಗುರು ಬಸವಣ್ಣನವರು,
ಹಾಗಾಗಿ ಯಾವುದೇ ಕಾಯಕವಾಗಲಿ ನಿಷ್ಠೆ ಯಿಂದ ಮಾಡಬೇಕು ಎಂದು ತಿಳಿಸಿದರು.

ಬಸವಾದಿ ಶರಣರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜ ಒಂದಾಗಲು ಸಾಧ್ಯ,
ಒಳ್ಳೆಯ ಗುಣ ನೋಡಬೇಕೆ ಹೊರತು ಸತ್ಯ ಶುದ್ಧವಿಲ್ಲದವರ ಆಡಬಂರದ ಜೀವನದವರನಲ್ಲ,
ಕೃಷಿ ಕೃತ್ಯ ಕಾಯಕವ ಮಾಡುವವನ ಪಾದವ ತೋರಿ ಬದುಕಿಸಯ್ಯ ಎಂದು ಬಸವ ಗುರು ಹೇಳಿದ್ದಾರೆ ಎಂದ ಬಸವಯೋಗಿ ಪ್ರಭುಗಳು ಬಣ್ಣಿಸಿದರು.

ಬೊಮ್ಮಲಪುರ ಬಸವಣ್ಣ ಮಾತನಾಡಿ, ಅನುಭವ ಮಂಟಪದ ಮೂಲಕ ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟ ವಿಶ್ವ ಗುರು ಬಸವಣ್ಣನವರ ತತ್ವದಿಂದ ಮಾತ್ರ ಲಿಂಗಾಯತ ಧರ್ಮ ಒಂದಾಗಲು ಸಾಧ್ಯ ಎಂದು ತಿಳಿಸಿದರು.

ಮೈಸೂರು ಕುದೇರು ಮಠದ ಇಮ್ಮಡಿ ಗುರುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ ಜಗತ್ತಿಗೆ ಕಾಯಕ ದಾಸೋಹ ಸಮಾನತೆಯ ಶಿವಯೋಗವನ್ನು ಕೊಟ್ಟ ಲಿಂಗಾಯತ ಧರ್ಮ ಜಗತ್ತಿನ ಶ್ರೇಷ್ಠ ಧರ್ಮವೆಂದು ಹೇಳಿದರು.

ಬಸವ ಭಾರತ ಪ್ರತಿಷ್ಠಾನ ಮತ್ತು ದಾರಿಪುರ ಗ್ರಾಮಸ್ಥರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.ಶಿವರುದ್ರಪ್ಪ, ಮುದ್ದಪ್ಪ, ವಕೀಲ ಬಸವಣ್ಣ ಮತ್ತಿತರರು ಹಾಜರಿದ್ದರು.

Advertisement
Tags :
FarmersMysore
Advertisement
Next Article