For the best experience, open
https://m.navayuganews.com
on your mobile browser.
Advertisement

ಮೈಸೂರು: ಮೈಸೂರಿನ ದಸರಾ ದಲ್ಲಿ ಇದೇ‌ ಪ್ರಥಮ ಬಾರಿಗೆ ಹಾರ್ಡಿಂಜ್ ವೃತ್ತದಲ್ಲಿ ವಿದ್ಯತ್ ದೀಒಗಳಿಂದ ನಾಡ ಪ್ರಭು ಶ್ರೀ ಕೆಂಪೇಗೌಡರ ಪುತ್ಥಳಿಯನ್ನು ನಿರ್ಮಿಸಲಾಗಿದೆ.

Advertisement

ಅದಕ್ಕಾಗಿ ಅಭಿಮಾನಿಗಳು ಬಹಳ ಖುಷಿಯಾಗಿದ್ದು,ಇದನ್ನು ನಿರ್ಮಿಸಿದವರನ್ನು ಅಭಿನಂದಿಸಿದ್ದಾರೆ.

ಕೆಂಪೇಗೌಡರ ದೀಪಾಲಂಕರಿತ ಪುತ್ಥಳಿ ಯನ್ನು ನಿರ್ಮಿಸಲು ಕಾರಣಕರ್ತರಾದ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್. ಸಿ ಅವರನ್ನು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಹನುಮಂತಯ್ಯ ಹಾಗೂ ರಘುರಾಮ್ ಅವರುಗಳು ರಮೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಿ ಸಂತಸ ಹಂಚಿಕೊಂಡರು.

Advertisement
Tags :
Advertisement