HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಕಾವಾಡಿಗರು ಮಾವುತರು ಆರೋಗ್ಯದ ಕಡೆ ಗಮನ ನೀಡಿ: ಹರೀಶ್ ಗೌಡ

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ ಮಾವುತರು, ಕವಾಡಿಗಳು ಮತ್ತು ಅವರ ಪರಿವಾರಕ್ಕೆ ಶಾಸಕ ಹರೀಶ್ ಗೌಡ ಉಪಹಾರ ನೀಡಿದರು
07:30 PM Sep 29, 2024 IST | ಅಮೃತ ಮೈಸೂರು
Advertisement

ಮೈಸೂರು: ಕಾವಾಡಿಗರು ಹಾಗೂ ಮಾವುತರ ಕುಟುಂಬದವರು ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಶಾಸಕ ಹರೀಶ್ ಗೌಡ ತಿಳಿಹೇಳಿದರು.

Advertisement

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ ಮಾವುತರು, ಕವಾಡಿಗಳು ಮತ್ತು ಅವರ ಪರಿವಾರಕ್ಕೆ ಸಾಂಪ್ರದಾಯದಂತೆ ಉಪಹಾರ‌ ವಿತರಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ನಿಮ್ಮ ಜೊತೆ ಸದಾ ನಾವು ಇರುತ್ತೇವೆ ಎಂದು ಅಭಯ ನೀಡಿದರು.

ಅರಣ್ಯ ಸಂಪತ್ತು ನಾಡಿನ ಸಂಪತ್ತು, ಕಾಡಿನ ಸಂರಕ್ಷಕರಾದ ನೀವು, ಅರಣ್ಯ ಸಂಪತ್ತಿನ ಭಾಗವೇ ಆಗಿದ್ದೀರಿ, ನಿಮಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಸರ್ಕಾರದಿಂದ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಡಿಎಫ್ಒ ಪ್ರಭು ಗೌಡ, ಆರ್ ಎಫ್ ಸಂತೋಷ, ಸ್ವಾತಿ ಎಂ ಗೌಡ ,ನಗರ ಪಾಲಿಕೆ ಮಾಜಿ ಸದಸ್ಯ ಗೋಪಿ, ಡೆಲ್ಲಿ ರವಿ, ಪ್ರಮೋದ್, ರವಿಚಂದ್ರ, ಸಂತೋಷ್, ಪ್ರಶಾಂತ್, ಸಂದೀಪ್, ವಿನೋದ್ ಅರಸ್, ನಿತಿನ್ ,ಶಿವಕುಮಾರ್, ಪ್ರಜ್ವಲ್, ಗಗನ್, ಜೈ ಶೀಲ್, ಲೋಕೇಶ್, ಗುರುರಾಜ್ ಶೆಟ್ಟಿ, ಮಂಜುನಾಥ್, ನವೀನ್, ಧನುಷ್ , ಶುಭ,ಮಾನ್ಯ ಮತ್ತಿತರರು ಹಾಜರಿದ್ದರು.

Advertisement
Tags :
Harish GowdaMysore
Advertisement
Next Article