HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ವಿವೇಕಾನಂದರ ವಾಣಿಯನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಿ: ಹರೀಶ್ ಗೌಡ

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಪುರುಷರ ವಿದ್ಯಾರ್ಥಿ ನಿಲಯ ಆವರಣದಲ್ಲಿ ಮೈಸೂರು ಯುವ ಬಳಗ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಯಲ್ಲಿ ಶಾಸಕ‌ ಹರೀಶ್ ಗೌಡ ಪಾಲ್ಗೊಂಡಿದ್ದರು.
07:10 PM Jan 12, 2025 IST | ಅಮೃತ ಮೈಸೂರು
Advertisement

ಮೈಸೂರು: ಸ್ವಾಮಿ ವಿವೇಕಾನಂದರು ಭಾರತದ ಯುವಶಕ್ತಿಯ ಪ್ರತೀಕ,ಅವರ ಸಂದೇಶ ವಾಣಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಶಾಸಕ ಹರೀಶ್ ಗೌಡ ಹೇಳಿದರು.

Advertisement

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಪುರುಷರ ವಿದ್ಯಾರ್ಥಿ ನಿಲಯ ಆವರಣದಲ್ಲಿ ಮೈಸೂರು ಯುವ ಬಳಗ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 163ನೇ ಜಯಂತಿ ವೇಳೆ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಭಾರತದ ಯುವ ಶಕ್ತಿಗೆ ಪ್ರೇರಣೆಯಾಗುವ ಮೂಲಕ ಯುವ ಭಾರತವನ್ನು ಜಗತ್ತಿಗೆ ಪರಿಚಯಿಸಿದರು ಎಂದು ಹೇಳಿದರು.

ಇಂದಿನ ಯುವ ಸಮುದಾಯ ವಿವೇಕಾನಂದರ ವಾಣಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು‌ ಎಂದು ಹರೀಶ್ ಗೌಡ ಕರೆ ನೀಡಿದರು.

ಉನ್ನತ ವಿದ್ಯಾಭ್ಯಾಸದ ಗುರಿ ಹೊಂದುವ ಮೂಲಕ ದೇಶದ ಕೀರ್ತಿಯನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಬೇಕು, ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನ ಪಾಲಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡ,ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಮಹಾದೇವ್, ಮಂಜುನಾಥ್, ಗುರುರಾಜ್ ಶೆಟ್ಟಿ,ಸಂಜಯ್ ಗೌಡ,ರವಿಚಂದ್ರ, ಸಂದೀಪ್, ಯೋಗೇಶ್, ನಂಜುಂಡಸ್ವಾಮಿ,ಹರೀಶ್ ಗೌಡ, ಚೆಲುವರಾಜ್, ನವೀನ್, ನಿತು,ಮಂಜುಳಾ, ಶಾಂತ, ಮಂಗಳ, ಕಾಂತಿಲಾಲ್ ಜೈನ್, ಲೋಕೇಶ್, ಮನು, ಚಂದ್ರಶೇಖರ್, ವಕೀಲರಾದ ಹೃತಿಕ್ ಗೌಡ, ಸೂರ್ಯ ಕುಮಾರ್, ಹರ್ಷ ಮತ್ತಿತರರು ಹಾಜರಿದ್ದರು.

Advertisement
Tags :
MysoreSwami Vivekananda Jayanti
Advertisement
Next Article