HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಕಾಯಕ ಮಾಡಿದರೆ ಬಡತನ ನಿರ್ಮೂಲನೆ ಸಾಧ್ಯ:ದೇವನೂರು ಪ್ರಶಾಂತ್

ಮೈಸೂರು ತಾಲೂಕಿನ ಶೆಟ್ಟನಾಯಕನಹಳ್ಳಿಯ ಪಟ್ಟದ ಮಠದಲ್ಲಿ ಬಸವ ಭಾರತ ಪ್ರತಿಷ್ಠಾನದ ವತಿಯಿಂದ ಬಸವಣ್ಣ ಸ್ವಾಮೀಜಿ ನೇತೃತ್ವದಲ್ಲಿ ಇಷ್ಟಲಿಂಗ ಧಾರಣೆ ನೆರವೇರಿಸಲಾಯಿತು.
03:12 PM Aug 07, 2024 IST | ಅಮೃತ ಮೈಸೂರು
Advertisement

ಮೈಸೂರು,ಆ.7: ಮೈಸೂರು ತಾಲೂಕಿನ ಶೆಟ್ಟನಾಯಕನಹಳ್ಳಿಯ ಪಟ್ಟದ ಮಠದಲ್ಲಿ ಬಸವ ಭಾರತ ಪ್ರತಿಷ್ಠಾನದ ವತಿಯಿಂದ ಬಸವಣ್ಣ ಸ್ವಾಮೀಜಿ ನೇತೃತ್ವದಲ್ಲಿ ಇಷ್ಟಲಿಂಗ ಧಾರಣೆ ನೆರವೇರಿಸಲಾಯಿತು.

Advertisement

ನರಸಿಂಹರಾಜಪುರ ಬಸವ ಕೇಂದ್ರದ ಬಸವಯೋಗಿಪ್ರಭುಗಳು ಇಷ್ಟಲಿಂಗ ಧಾರಣೆ ನೆರವೇರಿಸಿ ಶಿವಯೋಗ ವನ್ನು ನಡೆಸಿಕೊಟ್ಟರು.

ಈ ವೇಳೆ ಪ್ರವಚನ ನೀಡಿದ ದೇವನೂರು ಪ್ರಶಾಂತ್ ಅವರು,ಪ್ರತಿಯೊಬ್ಬರೂ ಕಾಯಕ ಮಾಡಿದರೆ ಬಡತನ ನಿರ್ಮೂಲನೆಯಾಗುತ್ತದೆ ಎಂದು ಹೇಳಿದರು.

ಸತ್ಯ ಶುದ್ಧ ಕಾಯಕ ಮಾಡಬೇಕು,ದಾಸೋಹ ಮಾಡಬೇಕು, ಮೈಸೂರಿನ ರಾಜ ಮಮ್ಮುಡಿ ಕ್ರಷ್ಣರಾಜ ಒಡೆಯರ್ ಗೂ ದೇವನೂರು ಗುರುಮಲ್ಲೇಶ್ವರರು ಸತ್ಯ ಶುದ್ಧ ಕಾಯಕ ಕಲಿಸಿದ್ದರು ಎಂದು ಸ್ಮರಿಸಿದರು.

ನಂದರಾಜ , ಶಿವರುದ್ರಪ್ಪ. ಸಿ, ಲಿಂಗ ರಾಜಪ್ಪ ಮಹಾದೇವ ಸ್ವಾಮಿ, ಶೆಟ್ಟನಾಯಕನಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Tags :
MysoreShattanayakana Halli
Advertisement
Next Article