For the best experience, open
https://m.navayuganews.com
on your mobile browser.
Advertisement

ರಾಯಚೂರು,ಆ.13: ಮಕ್ಕಳನ್ನು ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕನೇ ತಪ್ಪು ಮಾಡಿ ಜನರಿಂದ‌ ಒದೆ ತಿಂದ ಪ್ರಸಂಗ ರಾಯಚೂರಿನಲ್ಲಿ ನಡೆದಿದೆ.

Advertisement

ಅತಿಥಿ ಶಿಕ್ಷಕಿಗೆ ಮುಖ್ಯ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದ,ಹಾಗಾಗಿ ಶಿಕ್ಷಕನಿಗೆ ಶಿಕ್ಷಕಿಯ ಸಂಬಂಧಿಕರು ಧರ್ಮದೇಟು ಕೊಟ್ಟ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಹೊರವಲಯದ ಆದರ್ಶ ಸರ್ಕಾರಿ ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕನಾಗಿದ್ದ ಮೊಹಬೂಬ್ ಅಲಿ ಎಂಬಾತ ಅತಿಥಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಅಶ್ಲೀಲ ಮೆಸೇಜ್ ಕಳುಹಿಸಿ ತನ್ನೊಂದಿಗೆ ಸಹಕರಿಸುವಂತೆ ಪೀಡಿಸುತ್ತಿದ್ದ, ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಧಾವಿಸಿದ ಶಿಕ್ಷಕಿ ಕುಟುಂಬದವರು ಹಾಗೂ ಸಂಬಂಧಿಕರು, ಶಿಕ್ಷಕ ಮೆಹಬೂಬ್ ಅಲಿ ಶರ್ಟ್ ಹರಿಯುವಂತೆ ಧರ್ಮದೇಟು ನೀಡಿದ್ದಾರೆ.

ಶಿಕ್ಷಕಿಯ ಕಾಲಿಗೆ ಬಿದ್ದು ಆರೋಪಿ ಕ್ಷಮೆಯಾಚಿಸಿ,ನಂತರ ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆ ಕೇಳಿದ್ದಾನೆ,ಹಾಗಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ.ಆದರೆ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ.

Advertisement
Tags :
Advertisement