HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ನಿರಂತರ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ: ಶ್ರೀಧರ

ಮೈಸೂರಿನ ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ ತರಬೇತಿ ಪಡೆದು ಭಾರತೀಯ ಅರೆ ಸೇನಾಪಡೆಗೆ ಆಯ್ಕೆ ಆಗಿ ಡ್ಯೂಟಿಗೆ ಹೊರಡಲು ತಯಾರಾಗಿರುವವರನ್ನು‌ ಸನ್ಮಾನಿಸಿ ಗೌರವಿಸಲಾಯಿತು.
05:25 PM Dec 31, 2024 IST | ಅಮೃತ ಮೈಸೂರು
Advertisement

ಮೈಸೂರು: ನಿರಂತರ ಪ್ರಯತ್ನ ಪರಿಶ್ರಮ ಪಟ್ಟಾಗ‌ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಮೈಸೂರಿನ ಸೈನಿಕ ಅಕಾಡೆಮಿ‌ ಸಂಸ್ಥಾಪಕ ಶ್ರೀಧರ ಸಿ ಎಂ ಹೇಳಿದರು.

Advertisement

ಮೈಸೂರಿನ ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ ತರಬೇತಿ ಪಡೆದು ಭಾರತೀಯ ಅರೆ ಸೇನಾಪಡೆಗೆ ಆಯ್ಕೆ ಆಗಿ ಡ್ಯೂಟಿಗೆ ಹೊರಡಲು ತಯಾರಾಗಿರುವವರನ್ನು‌ ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿದರು.

ಇತ್ತೀಚಿನ ಆಕಾಂಕ್ಷಿಗಳು ಸುಲಭವಾಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ಅದು ಅಸಾಧ್ಯ, ಮೊದಲು ರಾಷ್ಟ್ರ ಭಕ್ತಿ ಇರಬೇಕು, ಎರಡನೆಯದು ಸೇವಾ ಮನೋಭಾವನೆ ಇರಬೇಕು, ಮೂರನೆಯದು ನಿರಂತರ ಪ್ರಯತ್ನ ಪರಿಶ್ರಮ ಪಡಬೇಕು ಆಗಲೇ ಗುರಿ ಮುಟ್ಟಲು ಸಾಧ್ಯ ಎಂದು ಶ್ರೀಧರ ತಿಳಿಸಿದರು.

ಶರಣ್, ಸೋಮರಪೇಟೆ (ಸಿ ಆರ್ ಪಿ ಎಫ್), ನಟೇಶ್, ನೆಲಮಂಗಲ (ಬಿ ಎಸ್ ಎಫ್), ಸುಜಿತ್, ಹುಣಸೂರು (ಸಿ ಐ ಎಸ್ ಎಫ್), ಶ್ರೇಯಸ್, ಹುಣಸೂರು (ಸಿ ಐ ಎಸ್ ಎಫ್)ಈ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.

ಅರೆ ಸೇನಾಪಡೆಗೆ ಆಯ್ಕೆ ಆಗಿ ಸೇವೆಗೆ ತೆರಳುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಶುಭ ಕೋರಲಾಯಿತು.

ಈ ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರುಗಳಾದ ಸ್ವಾಮಿ ಗೌಡ, ಪ್ರಫುಲ್ಲ ಕುಮಾರ್ ಸಿಬ್ಬಂದಿಗಳು, ಸಹ ಸಿಬ್ಬಂದಿಗಳು ಸೈನಿಕ ಅಕಾಡೆಮಿ ಅಭ್ಯರ್ಥಿಗಳು ಉಪಸ್ಥಿತರಿದ್ದರು.

Advertisement
Tags :
Mysore
Advertisement
Next Article