HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಅ.3 ರಿಂದ ಅ 9ರವರೆಗೆ ದಸರಾ ಕುಸ್ತಿ ಪಂದ್ಯಾವಳಿ

ವಸ್ತುಪ್ರದರ್ಶನ ಆವರಣದ ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ ದಸರಾ ಕುಸ್ತಿ ಉಪ ಸಮಿತಿ ಏರ್ಪಡಿಸಿದ್ದ ನಾಡ ಕುಸ್ತಿಗೆ ಜೋಡಿ ಕಟ್ಟುವ ಪ್ರಕ್ರಿಯೆಗೆ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ಚಲಾನೆ ನೀಡಿದರು.
04:51 PM Sep 23, 2024 IST | ಅಮೃತ ಮೈಸೂರು
Advertisement

ಮೈಸೂರು: ಈ ಭಾರಿ ಅ.3 ರಿಂದ ಅ. 9ರವರೆಗೆ ದಸರಾ‌ ನಾಡ ಕುಸ್ತಿ ಪಂದ್ಯಾವಳಿ ನಡೆಯಲಿದ್ದು 250 ಜೋಡಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ದಸರಾ ಕುಸ್ತಿ ಉಪ ಸಮಿತಿಯ ವಿಶೇಷಾಧಿಕಾರಿ ನಾಗೇಶ್ ತಿಳಿಸಿದರು.

Advertisement

ವಸ್ತುಪ್ರದರ್ಶನ ಆವರಣದ ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ ದಸರಾ ಕುಸ್ತಿ ಉಪ ಸಮಿತಿ ಏರ್ಪಡಿಸಿದ್ದ ನಾಡ ಕುಸ್ತಿಗೆ ಜೋಡಿ ಕಟ್ಟುವ ಪ್ರಕ್ರಿಯೆಗೆ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ಚಲಾನೆ ನೀಡಿದರು.

ಈ ವೇಳೆ ಮಾತನಾಡಿದ ನಾಗೇಶ್ ಅವರು,ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಕುಸ್ತಿಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು,ಕುಸ್ತಿಪಟುಗಳ ವಯಸ್ಸು, ತೂಕದ ಆಧಾರದಲ್ಲಿ 250 ಜೊತೆ ಕುಸ್ತಿ ಪಟುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

7 ದಿನಗಳ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಪ್ರತಿ ದಿನ 35-40 ಜೋಡಿಗಳಂತೆ ಸ್ಪರ್ಧೆ ನಡೆಯಲಿದೆ. ಇದೇ ಮೊದಲ ಬಾರಿಗೆ 17 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ನಾಡ ಕುಸ್ತಿ ಜೊತೆಗೆ ಪಾಯಿಂಟ್ ಕುಸ್ತಿ, ಪಂಜಾ ಕುಸ್ತಿ ಸ್ಪರ್ಧೆಗಳೂ ನಡೆಯಲಿವೆ. ಪುರುಷ ಹಾಗೂ ಮಹಿಳೆಯರೂ ಸೇರಿ ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಯುವಕರನ್ನು ಕುಸ್ತಿಯತ್ತ ಸೆಳೆಯಲು 17 ವರ್ಷದ ಒಳಗಿನವರ ವಿಭಾಗವನ್ನೂ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಸಚಿವ ಮಹದೇವಪ್ಪ ಮಾತನಾಡಿ ಮೈಸೂರು ಮಹಾರಾಜರು ಕುಸ್ತಿಯನ್ನು ಪ್ರೊತ್ಸಾಹ ಮಾಡಿದ್ದರಿಂದ ಹಳೇ ಮೈಸೂರು ಭಾಗದಲ್ಲಿ ಜಗಜಟ್ಟಿ ಪೈಲ್ವಾನರು ಬೆಳಕಿಗೆ ಬಂದರು ಎಂದು ಸ್ಮರಿಸಿದರು.

ರುದ್ರ ಮೂಗ, ಬಾಲಾಜಿ, ಉರಿಬತ್ತಿ ನಂಜಯ್ಯ, ದಿಲ್ದಾರ್ ರಿಯಾಜ್ ಮೊದಲಾದವರು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದರು. ಆದರೆ ಇತ್ತೀಚೆಗೆ ಮೈಸೂರಿನಲ್ಲೇ ಕುಸ್ತಿಪಟುಗಳು ಕಡಿಮೆಯಾಗುತ್ತಿದ್ದಾರೆ ವಿಷಾದಿಸಿದರು.

ಕುಸ್ತಿಯನ್ನು ಉಳಿಸಿ ಬೆಳೆಸಲು ಇಲ್ಲಿನ ಗರಡಿ ಮನೆಗಳನ್ನು ಸದೃಢಗೊಳಿಸಿ, ಅಲ್ಲಿ ನುರಿತ ತರಬೇತುದಾರರನ್ನು ನೇಮಕ ಮಾಡಲು ಸರ್ಕಾರ ಕಾರ್ಯಪ್ರವೃತ್ತವಾಗಲಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಎನ್.ಸಿ. ವೆಂಕಟರಾಜು, ರಾಜ್ಯ ಕುಸ್ತಿ ಸಂಘದ ತಾಂತ್ರಿಕ ಅಧಿಕಾರಿ ಕೆ. ವಿನೋದ್‌ಕುಮಾರ್, ಹಿರಿಯ ಪೈಲ್ವಾನರಾದ ರಂಗಪ್ಪ, ನಂಜಪ್ಪ, ಛೋಟ ರಫೀಕ್, ಕೆಂಪೇಗೌಡ, ಅಮೃತ ಪುರೋಹಿತ ಉಪಸ್ಥಿತರಿದ್ದರು.

Advertisement
Tags :
MysoreWrestling
Advertisement
Next Article